ಕೂಡ್ಲು ಗ್ರಾಮದಲ್ಲಿರುವ ಅತ್ಯಂತ ಪುರಾತನ ಕ್ಷೇತ್ರವಾಗಿರುವ ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ 04.09.2022ನೇ ಭಾನುವಾರ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿರುವುದು. ಬೆಳಗ್ಗೆ 9.00 ಘಂಟೆಗೆ ಪೂಜೆ ಆರಂಭಗೊಳ್ಳಲಿರುವುದು.
ಮಧ್ಯಾಹ್ನ 12 ಘಂಟೆಗೆ ದೇವಸ್ಥಾನದ ಪೂಜೆ ಕಳೆದ ಮೇಲೆ ಸತ್ಯನಾರಾಯಣ ದೇವರ ಮಹಾಪೂಜೆ ನಡೆಯಲಿರುವುದು. 1.00 ಘಂಟೆಗೆ ಅನ್ನದಾನ ಆರಂಭಗೊಳ್ಳುವುದು.
ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ, ಸ್ಥಳಪುರಾಣಗಳನ್ನೊಳಗೊಂಡಿರುವ “ಚಕ್ರತೀರ್ಥ” ಎಂಬ ಕೃತಿ ಬಿಡುಗಡೆಗೊಳ್ಳಲಿರುವುದು. ಊರ, ಪರವೂರ ಭಕ್ತರನ್ನು ಈ ಕಾರ್ಯಕ್ರಮಕ್ಕೆ ವಿನಯಪೂರ್ವಕ ಆಮಂತ್ರಿಸಲಾಗಿದೆ ಎಂದು ಪೂಜಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.