ಶಾರ್ಕ್ ಮೀನೊಂದು ದೊಡ್ಡ ಕಪ್ಪು ಮೀನಿನ ಮೇಲೆ ಆಕ್ರಮಣ ಮಾಡುವ ಮೈ ನವಿರೇಳಿಸುವ ದೃಶ್ಯದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ದೃಶ್ಯದ ವೀಡಿಯೊವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಮೂಲ ಡಿಸ್ಕವರಿ ಪ್ಲಸ್ ಚಾನೆಲ್ ನವರ ವೀಡಿಯೊ ಇದಾಗಿದ್ದು ಇದನ್ನು ಇನ್ನೊಬ್ಬರು ಶೇರ್ ಮಾಡಿದ್ದಾರೆ.
ಸಮುದ್ರಗರ್ಭದ ಆಳದೊಳಗೆ ಎಂತೆಂತಹಾ ಅದ್ಭುತ ಚಿತ್ರವಿಚಿತ್ರ ಸಂಗತಿಗಳು ಅಡಗಿವೆ ಎಂಬುದನ್ನು ಇಂತಹಾ ವೀಡಿಯೋಗಳನ್ನು ನೋಡಿದಾಗ ಅರಿವಾಗುತ್ತದೆ.