ಭದ್ರತಾ ಸಿಬ್ಬಂದಿಗೆ ಥಳಿಸಿದ ಲಿಫ್ಟ್ ನಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬ ಥಳಿಸಿದ್ದಾನೆ. ಈ ವೀಡಿಯೋ ಈಗ ವೈರಲ್ ಆಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಸಂಬಂಧ ಗುರುಗ್ರಾಮ್ ಪೊಲೀಸರು ಆರೋಪಿ ವರುಣ್ ನಾಥ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 323 (ಗಾಯ ಉಂಟುಮಾಡುವ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹರ್ಯಾಣ, ಗುರುಗ್ರಾಮ್‌ನ ದಿ ಕ್ಲೋಸ್ ನಾರ್ತ್ ಅಪಾರ್ಟ್‌ಮೆಂಟ್‌ನ ನಿವಾಸಿಯೊಬ್ಬರು ಸ್ವಲ್ಪ ಸಮಯ ಲಿಫ್ಟ್‌ನಲ್ಲಿ ಸಿಲುಕಿದ ನಂತರ, ಲಿಫ್ಟ್ ನಿಂದ ಹೊರಗೆ ಬಂದಾಗ ಭದ್ರತಾ ಸಿಬ್ಬಂದಿಯನ್ನು ಥಳಿಸಿದ್ದಾರೆ. ಆ ವ್ಯಕ್ತಿಯ ಮೇಲೆ ಎಫ್‌ಐಆರ್ ದಾಖಲಾಗಿದೆ.
ನಾನು ಅವನನ್ನು 3-4 ನಿಮಿಷಗಳಲ್ಲಿ ಲಿಫ್ಟ್‌ನಿಂದ ಹೊರಬರಲು ಸಹಾಯ ಮಾಡಿದೆ. ಹೊರಗೆ ಬಂದ ತಕ್ಷಣ ಥಳಿಸಿದರು ಎಂದು ಸೆಕ್ಯೂರಿಟಿ ಗಾರ್ಡ್ ಅಶೋಕ್ ಕುಮಾರ್ ಹೇಳಿದ್ದಾರೆ.