ತಮ್ಮ ಮನೆಯ ಹೊರಗಡೆ ಮಂಚ ಹಾಕಿ ಮಲಗಿದ್ದ ಮಹಿಳೆಯೊಬ್ಬರು ನಾಗರಹಾವು ಕಡಿತದಿಂದ ಪಾರಾಗಿದ್ದಾರೆ. ಅವಳ ಮೇಲೆ ಹತ್ತಿದ ನಾಗರಹಾವು ಸ್ವಲ್ಪ ಹೊತ್ತು ದೇಹದ ಮೇಲೆ ಹೆಡೆಯೆತ್ತಿ ನಿಂತು ಆಮೇಲೆ ಹೊರಟುಹೋಯಿತು.
ಕರ್ನಾಟಕದ ಕಲಬುರಿಗಿ ಜಿಲ್ಲೆಯ ಮಲ್ಲಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯಗಳನ್ನು ಸ್ಥಳೀಯರೊಬ್ಬರು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ವೈರಲ್ ಆಗಿದೆ.
ಮನೆಯ ಹೊರಗಡೆ ಕೃಷಿಭೂಮಿಯಲ್ಲಿ ಹಾಕಿದ್ದ ಹಾಸಿಗೆಯ ಮೇಲೆ ಮಹಿಳೆ ಮಲಗಿದ್ದಾಗ ನಾಗರ ಹಾವು ಆಕೆಯ ಮೇಲೆ ಹತ್ತಿ ಹೆಡೆಯೆತ್ತಿ ನೋಡುತ್ತಿತ್ತು.. ಹಾವಿನ ಚಲನವಲನದಿಂದ ಎಚ್ಚೆತ್ತುಕೊಂಡ ಮಹಿಳೆ ಮಲಗಿದ್ದ ನಾಗನನ್ನು ಕಂಡು ಕದಲದೆ ಸುಮ್ಮನಾದರು.
ತನ್ನನ್ನು ಈ ಅಪಾಯದಿಂದ ಪಾರು ಮಾಡುವಂತೆ ದೇವರಲ್ಲಿ ಬೇಡಿಕೊಂಡಳು. ಮಹಿಳೆ ಬೊಬ್ಬೆ ಹೊಡೆಯುತ್ತಿರುವುದನ್ನು ಕಂಡ ಗಂಡ ಮತ್ತು ಮಕ್ಕಳು ಬೊಬ್ಬೆ ಹೊಡೆದು ಹಾವನ್ನು ಓಡಿಸಲು ಪ್ರಯತ್ನಿಸಿದರು. ಆದರೆ ಇದರಿಂದ ವಿಚಲಿತಗೊಂಡ ನಾಗರಹಾವು ಹೆಡೆಯೆತ್ತಿ ಬುಸುಗುಡುತ್ತಿತ್ತು.
ಗಂಡ ಮತ್ತು ಮಕ್ಕಳು ಮನೆಯೊಳಗೆ ಮರೆಯಾದ ಮೇಲೆ ಹಾವು ಅದರ ಪಾಡಿಗೆ ಹೊರತು ಹೋಯಿತು. ಸ್ವಲ್ಪ ಹೊತ್ತಿನವರೆಗೆ ಹಾಸಿಗೆಯ ಮೇಲೆ ಮಲಗಿದ್ದ ಹಾವು ಮಹಿಳೆಗೆ ಯಾವುದೇ ತೊಂದರೆಯಾಗದಂತೆ ಹೊರಟು ಹೋಗಿದೆ.