ಮಂಗಳೂರಿನ ಮಾರಿಗುಡಿ ದೇವಸ್ಥಾನದ ಅರ್ಚಕರ ಪತ್ನಿ ನಾಪತ್ತೆಯಾಗಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ. ಈ ಸಂಬಂಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ 12 ವರ್ಷಗಳಿಂದ ನಗರದ ಮಾರಿಗುಡಿ ದೇವಸ್ಥಾನದಲ್ಲಿ ಅರ್ಚಕರಾಗಿರುವ, ಭಟ್ಕಳ ತಾಲೂಕಿನ ನಿವಾಸಿ ವ್ಯಕ್ತಿಯೋರ್ವರ ಪತ್ನಿ ಪ್ರೇಮಾ (20) ನಾಪತ್ತೆಯಾಗಿರುವ ಮಹಿಳೆ.
ಎಂದಿನಂತೆ ಸಂಜೆಯ ಹೊತ್ತಿಗೆ ದೇವಸ್ಥಾನದ ಪೂಜೆ ಮುಗಿಸಿ ಮನೆಗೆ ಹೋದಾಗ ಪತ್ನಿ ಮನೆಯಲ್ಲಿ ಇರಲಿಲ್ಲ ಎಂದು ಮಂಗಳೂರು ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.
ಕಾಣೆಯಾದ ಮಹಿಳೆಯ ಚಹರೆ 5.5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ ಮತ್ತು ಕಾಣೆಯಾಗುವ ದಿನ ಬಿಳಿ ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಟೀ ಶರ್ಟ್ ಧರಿಸಿದ್ದರು ಮತ್ತು ಕನ್ನಡಭಾಷೆ ಮಾತನಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಹತ್ತಿರದಪೊಲೀಸ್ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.