Sunday, January 19, 2025
Homeಸುದ್ದಿಭೀಕರ ಅಪಘಾತ - ಧರ್ಮಸ್ಥಳ,ಸುಬ್ರಹ್ಮಣ್ಯ ಹೆದ್ದಾರಿಯ ನೆಟ್ಟಣದಲ್ಲಿ ಎರ್ಟಿಗಾ-ಓಮ್ನಿ ಢಿಕ್ಕಿ, ಏಳು ಮಂದಿಗೆ ಗಾಯ 

ಭೀಕರ ಅಪಘಾತ – ಧರ್ಮಸ್ಥಳ,ಸುಬ್ರಹ್ಮಣ್ಯ ಹೆದ್ದಾರಿಯ ನೆಟ್ಟಣದಲ್ಲಿ ಎರ್ಟಿಗಾ-ಓಮ್ನಿ ಢಿಕ್ಕಿ, ಏಳು ಮಂದಿಗೆ ಗಾಯ 

ಭೀಕರ ಅಪಘಾತ – ಧರ್ಮಸ್ಥಳ-ಸುಬ್ರಹ್ಮಣ್ಯ ಹೆದ್ದಾರಿಯ ನೆಟ್ಟಣದಲ್ಲಿ ಎರ್ಟಿಗಾ- ಓಮ್ನಿ ಢಿಕ್ಕಿ, ಏಳು ಮಂದಿಗೆ ಗಾಯ 

ಭೀಕರ ಅಫಘಾತವೊಂದರಲ್ಲಿ ಎರ್ಟಿಗಾ ಕಾರು ಮತ್ತು ಮಾರುತಿ ಓಮ್ನಿ ನಡುವೆ ಢಿಕ್ಕಿ ಸಂಭವಿಸಿ ಏಳು ಜನ ಗಾಯಗೊಂಡ ಘಟನೆ ನಿನ್ನೆ ಶನಿವಾರ ನಡೆದಿದೆ. 

ಧರ್ಮಸ್ಥಳ-ಸುಬ್ರಹ್ಮಣ್ಯ ಹೆದ್ದಾರಿಯ ನೆಟ್ಟಣದಲ್ಲಿ ಎಂಬಲ್ಲಿ ಈ ಘಟನೆ ನಡೆದಿದ್ದು ಕಾರುಗಳೆರಡೂ ನುಜ್ಜುಗುಜ್ಜಾಗಿದ್ದು ಎರಡೂ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದವರು ಗಾಯಗೊಂಡಿದ್ದಾರೆ.

ಬೆಂಗಳೂರು ಮೂಲದ ಕುಟುಂಬವೊಂದು ಧರ್ಮಸ್ಥಳ ಕ್ಷೇತ್ರ ಸಂದರ್ಶನ ಮುಗಿಸಿ ಸುಬ್ರಹ್ಮಣ್ಯ ಕ್ಷೇತ್ರದತ್ತ ಪ್ರಯಾಣಿಸುತ್ತಿತ್ತು. ಓಮ್ನಿ ಕಾರಿನಲ್ಲಿದ್ದ ಶಿವಮೊಗ್ಗ, ಶಿಕಾರಿಪುರದ ಪ್ರಯಾಣಿಕರು ಧರ್ಮಸ್ಥಳದತ್ತ ಬರುತ್ತಿದ್ದರು ಎಂದು ತಿಳಿದುಬಂದಿದೆ.

ನೆಟ್ಟಣ ಸಮೀಪದ ಅಮಲ ಫಾರ್ಮ್ ಸಮೀಪ ಎರಡೂ ಕಾರುಗಳು ಮುಖಾಮುಖಿಯಾಗಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು ಕೂಡಲೇ ಕಡಬ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.

ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಸ್ಥಳಕ್ಕೆ ಕಡಬ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments