ಇಲ್ಲೊಂದು ಜಿಂಕೆಗೆ ಯಾವಾಗ ರಸ್ತೆ ದಾಟಬೇಕೆಂಬುದು ಗೊತ್ತಿದೆ!
ವಾಹನಗಳು ನಿಂತ ಮೇಲೆ ಜಿಂಕೆಯೊಂದು ಜೀಬ್ರಾ ಕ್ರಾಸಿಂಗ್ ನಲ್ಲಿಯೇ ಸಮಯ ನೋಡಿ ರಸ್ತೆ ದಾಟುತ್ತಿರುವ ದೃಶ್ಯದ ವೀಡಿಯೊ ಈಗ ವೈರಲ್ ಆಗಿದೆ.
ಈ ಕಾನೂನು ಪಾಲಿಸುವ ಜಿಂಕೆ ಕಂಡದ್ದು ಜಪಾನಿನ ನಾರಾ ನಗರದಲ್ಲಿ.
ಈ ವೀಡಿಯೊ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ತಮಗೆ ಬೇಕಾದಂತೆ ರಸ್ತೆ ದಾಟುವ ಜನರಿಗೆ ಒಂದು ಪಾಠವಾಗಿದೆ.