ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯೊಬ್ಬಳು ಆಗಸ್ಟ್ 23ರಂದು ಬೆಳಗ್ಗೆಯಿಂದ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಕಾಪು ಮಸೀದಿ ಬಳಿಯ ಉದ್ಯಾವರ ಸಂಪಿಗೆನಾಳ ನಿವಾಸಿ ನೇತ್ರಾವತಿ (20) ನಾಪತ್ತೆಯಾಗಿರುವ ಯುವತಿ. ನೇತ್ರಾವತಿ ಮೂರು ತಿಂಗಳಿನಿಂದ ಉದ್ಯಾವರದ ‘ಸ್ಮಾರ್ಟ್ ಮೊಬೈಲ್’ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು.
ಆಗಸ್ಟ್ 22 ರಂದು ರಾತ್ರಿ ಊಟ ಮುಗಿಸಿ ಮಲಗಿದ್ದ ಆಕೆ ಆಗಸ್ಟ್ 23 ರಂದು ಬೆಳಗ್ಗೆ ಹಾಲ್ ನಿಂದ ಎದ್ದು ಬಾತ್ ರೂಂಗೆ ಹೋಗಿ ನಾಪತ್ತೆಯಾಗಿದ್ದಾಳೆ ಎಂದು ಅಕ್ಕ ವಿಜಯಲಕ್ಷ್ಮಿ ಪೊಲೀಸರಿಗೆ ನೀಡಿದ ದೂರಿನಂತೆ ತಿಳಿಸಿದ್ದಾರೆ.
ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.