ವೇಗವಾಗಿ ಬಂದ ಲಾರಿಯೊಂದು ಮಗು ಸಹಿತ ಮೂವರು ಪ್ರಯಾಣಿಸುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದೆ.
ಢಿಕ್ಕಿಯಾದ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿದ್ದು ದಂಪತಿಗಳು ಮತ್ತು ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬಳ್ಳಾರಿ ಕೌಲ್ ಬಜಾರ್ ಫ್ಲೈ ಓವರ್ ನಲ್ಲಿ ನಡೆದಿದೆ.
ಮೃತರನ್ನು ವೀರೇಶ್, ಅಂಜಲಿ ಮತ್ತು ಮಗು ದಿನೇಶ್ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಮಗು ಗಂಭೀರ ಗಾಯಗೊಂಡಿದೆ.
ಲಾರಿ ಚಾಲಕನ ನಿರ್ಲಕ್ಷ್ಯತನದ ಚಾಲನೆಯೇ ಅಫಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಧಾವಿಸಿದ್ದು ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.
