Saturday, January 18, 2025
Homeಸುದ್ದಿಮುಂಬೈಯ ಐಷಾರಾಮಿ ಪಂಚತಾರಾ (5 ಸ್ಟಾರ್) ಹೋಟೆಲ್‌ಗೆ ಬಾಂಬ್ ಬೆದರಿಕೆ ಕರೆ - ಬಾಂಬ್‌ಗಳನ್ನು...

ಮುಂಬೈಯ ಐಷಾರಾಮಿ ಪಂಚತಾರಾ (5 ಸ್ಟಾರ್) ಹೋಟೆಲ್‌ಗೆ ಬಾಂಬ್ ಬೆದರಿಕೆ ಕರೆ – ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲು 5 ಕೋಟಿ ರೂ. ಬೇಡಿಕೆ

ಮುಂಬೈಯ ಐಷಾರಾಮಿ ಪಂಚತಾರಾ (5 ಸ್ಟಾರ್) ಲಲಿತ್ ಹೋಟೆಲ್‌ಗೆ ಬಾಂಬ್ ಬೆದರಿಕೆ ಕರೆ  ಬಂದಿದೆ. ಮುಂಬೈನ ಲಲಿತ್ ಹೋಟೆಲ್‌ಗೆ ಬೆದರಿಕೆ ಕರೆ ಬಂದಿದ್ದು, ಹೋಟೆಲ್‌ನಲ್ಲಿ ನಾಲ್ಕು ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಬೆದರಿಕೆ ಹಾಕಲಾಗಿದೆ.

ಮುಂಬೈನ ಲಲಿತ್ ಹೋಟೆಲ್‌ಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು ತನಿಖೆ ನಡೆಯುತ್ತಿದೆ. ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲು ಕರೆ ಮಾಡಿದ ವ್ಯಕ್ತಿ 5 ಕೋಟಿ ರೂ. ಗಳನ್ನು ಬೇಡಿಕೆಯಿಟ್ಟಿದ್ದಾನೆ. ಅಪರಿಚಿತ ಕರೆ ಮಾಡಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಸಹರ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಲಲಿತ್ ಹೋಟೆಲ್‌ಗೆ ಭಾನುವಾರ ಬಾಂಬ್ ಬೆದರಿಕೆ ಕರೆ ಬಂದಿತ್ತು. ಅಪರಿಚಿತ ಕರೆ ಮಾಡಿದವರು ಹೋಟೆಲ್ ಆಡಳಿತವು ಬಾಂಬ್‌ಗಳನ್ನು ಸ್ಪೋಟಿಸದೆ ಇರಲು ತನಗೆ 5 ಕೋಟಿ ರೂ. ಗಳನ್ನು ನೀಡಬೇಕೆಂದು ಹೇಳಿದ್ದಾರೆ ಎಂದು ಹೋಟೆಲ್ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ.

ಪೊಲೀಸರು ಹೋಟೆಲ್‌ನಲ್ಲಿ ತಪಾಸಣೆ ನಡೆಸಿದಾಗ ಏನೂ ಪತ್ತೆಯಾಗಿಲ್ಲ. ಅಪರಿಚಿತ ವ್ಯಕ್ತಿಯ ವಿರುದ್ಧ ಸುಲಿಗೆ, ಬೆದರಿಕೆ ಪ್ರಕರಣ ದಾಖಲಿಸಲಾಗಿದೆ. ಮುಂಬೈ ಪೊಲೀಸ್‌ನ ಸಂಚಾರ ನಿಯಂತ್ರಣ ಘಟಕಕ್ಕೆ 26/11 ರೀತಿಯ ಭಯೋತ್ಪಾದಕ ದಾಳಿಯ ಎಚ್ಚರಿಕೆ ಸಂದೇಶ ಬಂದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.

ಮುಂಬೈನ ತಾಜ್ ಪ್ಯಾಲೇಸ್ ಮತ್ತು ಒಬೆರಾಯ್ ಟ್ರೈಡೆಂಟ್ 26/11 ದಾಳಿಯ ಸಮಯದಲ್ಲಿ ಭಯೋತ್ಪಾದಕರ ದಾಳಿಗೆ ಒಳಗಾದ ಐಷಾರಾಮಿ ಹೋಟೆಲ್‌ಗಳಲ್ಲಿ ಸೇರಿವೆ.

ಪಾಕಿಸ್ತಾನ ಮೂಲದ ಫೋನ್ ಸಂಖ್ಯೆಯಿಂದ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ ಮತ್ತು ಆರು ಜನರು ಭಾರತದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸುತ್ತಾರೆ ಎಂದು ಹೇಳಲಾಗಿದೆ. ಈ ಸಂದೇಶವನ್ನು ಕಳುಹಿಸಿರುವವರು ಆತನ ಪ್ರಸ್ತುತ ಸ್ಥಳವನ್ನು ಪಾಕಿಸ್ತಾನದಲ್ಲಿ ಗುರುತಿಸಬಹುದು ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments