41 ವರ್ಷದ ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಹಾಗೂ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಗೋವಾದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಬಿಜೆಪಿ ನಾಯಕಿ ಹಾಗೂ ನಟಿ ಸೋನಾಲಿ ಫೋಗಟ್ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಿಗ್ ಬಾಸ್ 14 ರ ಸ್ಪರ್ಧಿ ಮತ್ತು ನಟಿ ಸೋನಾಲಿ ಫೋಗಟ್ ಆಗಸ್ಟ್ 23 ರಂದು ಗೋವಾದಲ್ಲಿ ಕೊನೆಯುಸಿರೆಳೆದರು.
ಅವರು ಗೋವಾದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಸೋನಾಲಿ ತನ್ನ ಕೆಲವು ಸಿಬ್ಬಂದಿಯೊಂದಿಗೆ ಆಗಸ್ಟ್ 22 ರಂದು ಗೋವಾಗೆ ಪ್ರಯಾಣ ಬೆಳೆಸಿದ್ದರು. ನಟಿ ಆಗಸ್ಟ್ 24 ರವರೆಗೆ ಅಲ್ಲಿಯೇ ಇರಬೇಕಿತ್ತು.
ಸೋನಾಲಿ ಆಗಸ್ಟ್ 22 ರಂದು ರಾತ್ರಿ ಪಾರ್ಟಿಗೆ ಹೋಗಿದ್ದರು ಮತ್ತು ಮರುದಿನ ಮನೆಗೆ ಮರಳಿದರು. ಗಂಟೆಗಳ ನಂತರ, ಆಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಕೆಯ ಅಂತಿಮ ಸಂಸ್ಕಾರದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಮನರಂಜನಾ ಕ್ಷೇತ್ರದ ಹಲವು ಗಣ್ಯರು ಆಕೆಯ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಡಿಸೆಂಬರ್ 2016 ರಲ್ಲಿ, ಅವರು ತಮ್ಮ ಪತಿ ಸಂಜಯ್ ಫೋಗಟ್ ಅವರನ್ನು ಕಳೆದುಕೊಂಡರು. ಆಕೆಯ ಪತಿ 42 ನೇ ವಯಸ್ಸಿನಲ್ಲಿ ತನ್ನ ತೋಟದ ಮನೆಯಲ್ಲಿ ನಿಗೂಢ ಪರಿಸ್ಥಿತಿಯಲ್ಲಿ ನಿಧನರಾದರು. ಇವರಿಗೆ ಯಶೋಧರ ಫೋಗಟ್ ಎಂಬ ಮಗಳಿದ್ದಾಳೆ.