ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಮ್ಮಾಡಿ ಸಮೀಪದ ದೇವಲ್ಕುಂದದಲ್ಲಿ ಕುಡುಕ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದುಹಾಕಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದಂಪತಿಗಳೀರ್ವರೂ ಶಿವಮೊಗ್ಗ ಜಿಲ್ಲೆಯ ಸಾಗರದ ಸಮೀಪದವರಾಗಿದ್ದು ಹೆಮ್ಮಾಡಿ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದರು.
ಇಂದು ಸೋಮವಾರ ನಡೆದ ಘಟನೆಯೊಂದರಲ್ಲಿ ತನ್ನ ಪತ್ನಿ ಪೂರ್ಣಿಮಾ (38) ಳನ್ನು ಕಬ್ಬುನದ ತಟ್ಟೆಯಿಂದ ಬಡಿದಿದ್ದ ಪತಿ ರವಿ ಆಕೆ ಸತ್ತುಹೋದುದನ್ನು ಕಂಡು ಬಳಿಕ ತಾನೂ ವಿಷ ಸೇವಿಸಿದ್ದಾನೆ. ಇಬ್ಬರೂ ಒಂದೇ ಕೋಣೆಯಲ್ಲಿ ಮೃತಪಟ್ಟಿದ್ದಾರೆ.
ಪತಿ ರವಿ ಕಬ್ಬಿಣದ ಪ್ಲೇಟ್ ನಿಂದ ಬಡಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳೂ ಸ್ಥಳದಲ್ಲಿದ್ದು ಹಾಜರಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.