.
ಶ್ರೀಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ ಸಾಪ್ತಾಹಿಕ ಕಾರ್ಯಕ್ರಮದಲ್ಲಿ ಶ್ರೀ ರಾಮಾಯಣ ಸರಣಿಯ ಶ್ರೀರಾಮ ಅಯೋಧ್ಯಾಗಮನ ತಾಳಮದ್ದಳೆಯು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು.
ಭಾಗವತರಾಗಿ ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಪದ್ಮನಾಭ ಕುಲಾಲ್ ಇಳಂತಿಲ, ಹಿಮ್ಮೆಳದಲ್ಲಿ ಮೋಹನ ಶರವೂರು, ಶ್ರೀಪತಿ ಭಟ್ ಉಪ್ಪಿನಂಗಡಿ ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ನೇರೆಂಕಿ , ಹರೀಶ್ ಬಾರ್ಯ, ಸಂಜೀವ ಪಾರೆಂಕಿ , ತಿಲಕಾಕ್ಷ, ಶ್ರೀಮತಿ ಪುಷ್ಪಲತಾ .ಎಂ ಮತ್ತು ದಿವಾಕರ ಆಚಾರ್ಯ ಗೇರುಕಟ್ಟೆ ಭಾಗವಹಿಸಿದ್ದರು.
ಕಲಾಪೋಷಕರಾದ ಉಮೇಶ್ ಶೆಣೈ, ಗಂಗಾಧರ್ ಟೈಲರ್ ಸರಣಿ ತಾಳಮದ್ದಳೆಯ ಯಶಸ್ಸಿಗೆ ಶುಭ ಹಾರೈಸಿದರು.
