ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು
ಇವರ ಸಂಯುಕ್ತ ಆಶ್ರಯದಲ್ಲಿ 2022ನೇ ಸಾಲಿನ ಜಿಲ್ಲಾಮಟ್ಟದ ಸರ್ ಸಿ.ವಿ ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯು ಅಂಬಿಕಾ ಪದವಿಪೂರ್ವ ವಿದ್ಯಾಲಯ ಬಪ್ಪಳಿಗೆ ಪುತ್ತೂರು ಇಲ್ಲಿ 20-08-2022ರಂದು ನಡೆಯಿತು.
ಜಿಲ್ಲೆಯಾದ್ಯಾಂತದ 87 ಪ್ರೌಢ ಶಾಲಾ ತಂಡಗಳು ಭಾಗವಹಿಸಿದ್ದು, ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮಶಾಲೆ ಯ ಅನ್ವಿತ್‌ಎನ್, 10ನೇತರಗತಿ [ಶ್ರೀಪತಿ ಎನ್ ಮತ್ತು ವಿದ್ಯಾಲಕ್ಷ್ಮಿ ಎ ದಂಪತಿ ಪುತ್ರ] ಹಾಗೂ ಧಾತ್ರಿ ಸಿ.ಹೆಚ್, 10ನೇ ತರಗತಿ [ದಿನೇಶ್.ಸಿ.ಎಚ್ ಮತ್ತು ಪದ್ಮ ಲಕ್ಷ್ಮಿ ದಂಪತಿ ಪುತ್ರಿ] ಅವರನ್ನೊಳಗೊಂಡ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಪ್ರಥಮ ಸ್ಥಾನವು ಪ್ರಶಸ್ತಿ ಪತ್ರ ಹಾಗೂ ರೂಪಾಯಿ 3000 ನಗದನ್ನು ಒಳಗೊಂಡಿರುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.