ಶೀರ್ಷಿಕೆ ನೋಡಿ ಆಶ್ಚರ್ಯವಾಗಬಹುದು ಅಲ್ಲವೇ? ವಧೂವರರ ಆತುರವನ್ನು ನೋಡಿ ಹೀಗೆ ವ್ಯಂಗ್ಯವಾಗಿ ಹೇಳಲಾಗಿದೆ.
ಟ್ವಿಟ್ಟರ್ ನಲ್ಲಿ ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಪಾಶ್ಚಿಮಾತ್ಯ ದೇಶವೊಂದರಲ್ಲಿ ಈ ಘಟನೆ ನಡೆದಿದೆ.
ಪಾಶ್ಚಾತ್ಯ ಪದ್ಧತಿಯಂತೆ ಮದುವೆಯ ವಿಧಿವಿಧಾನ, ಪ್ರತಿಜ್ಞೆಗಳನ್ನು ಪೂರೈಸಿಕೊಟ್ಟ ಅಧಿಕಾರಿ ಅಥವಾ ಪ್ರೀಸ್ಟ್ (ಅರ್ಚಕ) ವಧೂವರರನ್ನು ಪರಸ್ಪರ ಆಲಿಂಗಿಸಿಕೊಳ್ಳಲು ಸೂಚಿಸುತ್ತಾರೆ.
ಆದರೆ ಇಲ್ಲಿ ಆತುರಗೊಂಡಂತೆ ಕಾಣಿಸುತ್ತಿದ್ದ ವರನು ಆಲಿಂಗಿಸುವ ಭರದಲ್ಲಿ ವಧುವಿನೊಡನೆ ತಾನೂ ಕೆಳಕ್ಕೆ ಬೀಳುತ್ತಾನೆ. ಇದನ್ನು ನೋಡಿ ಆ ವೀಡಿಯೋಕ್ಕೆ “Straight to the Honeymoon” (ನೇರವಾಗಿ ಹನಿಮೂನ್ ಗೆ ) ಎಂದು ವ್ಯಂಗ್ಯವಾಗಿ ಶೀರ್ಷಿಕೆ ಕೊಡಲಾಗಿದೆ.