ಮಳೆಗಾಲದಲ್ಲಿ ಹಾವುಗಳ ಬಗ್ಗೆ ಅತಿಯಾಗಿ ಜಾಗರೂಕತೆಯನ್ನು ವಹಿಸುವುದು ಮುಖ್ಯ.
ಕರ್ನಾಟಕದ ಮಂಡ್ಯ ಜಿಲ್ಲೆಯ ಈ ಸಿಸಿಟಿವಿ ದೃಶ್ಯ ನೋಡುವಾಗ ಒಮ್ಮೆಗೆ ಎದೆ ಝಲ್ ಎನ್ನುತ್ತದೆ. ಮಗುವೊಂದು ತಾಯಿಯ ಜೊತೆಯಲ್ಲಿ ಮನೆಯ ಹೊರಗೆ ಬರುತ್ತದೆ. ಹಾವನ್ನು ನೋಡದೆ ಮಗು ಹಾವಿನ ತಲೆಯ ಹತ್ತಿರವೇ ಕಾಲಿಡುತ್ತದೆ.
ಕೊಡಲೇ ನಾಗರ ಹಾವು ಬುಸುಗುಡುತ್ತದೆ. ಕೂಡಲೇ ಎಚ್ಚೆತ್ತ ತಾಯಿ ಮಗುವನ್ನು ರಕ್ಷಣೆ ಮಾಡುತ್ತಾಳೆ.
ಮಳೆಗಾಲದಲ್ಲಿ ಹಾವಿನ ಬಿಲಗಳು ನೀರಿನಿಂದ ತುಂಬುತ್ತವೆ. ಇದರಿಂದ ಹಾವುಗಳು ಒಣಗಿದ ಪ್ರದೇಶವನ್ನು ಅರಸಿ ಬರುತ್ತವೆ. ಆದುದರಿಂದ ಮನೆಯ ಸುತ್ತಮುತ್ತ ಕಾಲಿಡುವಾಗ ಜಾಗರೂಕತೆಯನ್ನು ವಹಿಸಿ.
ಅದರಲ್ಲೂ ಮಕ್ಕಳ ಬಗ್ಗೆ ಅತಿಯಾದ ಜೋಪಾನ, ಕಾಳಜಿ ಇರಲಿ. ಹಾವುಗಳು ಒಮ್ಮೆ ಬಂದುವು ಎಂದಾದರೆ ನೀವು ಓಡಿಸಲು ಹೋಗಬೇಡಿ. ವೃತ್ತಿನಿರತ ಹಾವು ಹಿಡಿಯುವವರನ್ನು ಕರೆಯುವುದು ಉತ್ತಮ.
ಏನೇ ಆಗಲಿ ಮಗುವನ್ನು ರಕ್ಷಿಸಿದ ತಾಯಿಯ ಧೈರ್ಯಕ್ಕೆ ಮೆಚ್ಚಲೇ ಬೇಕು.