ಸ್ವಾತಂತ್ರ್ಯ ದಿನಾಚರಣೆ : ವಿದ್ಯೋದಯ ಸಮೂಹ ಸಂಸ್ಥೆಗಳು, ಉಡುಪಿ
ವಿದ್ಯೋದಯ ಟ್ರಸ್ಟ್(ರಿ.)ನ ಅಂಗಸಂಸ್ಥೆಗಳಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯೋದಯ ಪಬ್ಲಿಕ್ ಸ್ಕೂಲ್, ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ,ವಿದ್ಯೋದಯ ವಿದ್ಯಾಲಯ, ಶ್ರೀಕೃಷ್ಣ ಶಿಶುಮಂದಿರಗಳ ಧ್ವಜಾರೋಹಣವನ್ನು ಪ್ರೊ. ಹೇರಂಜೆ ಕೃಷ್ಣ ಭಟ್, ನಿವೃತ್ತ ನಿರ್ದೇಶಕರು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಇವರು ನೆರವೇರಿಸಿ ವಿದಾರ್ಥಿಗಳನ್ನುದ್ದೇಶಿಸಿ ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಿದರು.
ವಿದ್ಯೋದಯ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆಗಳ ಧ್ವಜಾರೋಹಣವನ್ನುಕಾಲೇಜಿನ ನಿವೃತ್ತ ಪ್ರಾಂಶುಪಾಲ ಶ್ರೀ ಎ.ಎಲ್. ಛಾತ್ರ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯೋದಯ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಶ್ರೀ ಎನ್. ನಾಗರಾಜ್ ಬಲ್ಲಾಳ್, ಕಾರ್ಯದರ್ಶಿ ಶ್ರೀ ಕೆ. ಗಣೇಶ್ ರಾವ್, ಕೋಶಾಧಿಕಾರಿ ಶ್ರೀ ಪದ್ಮರಾಜ್ ಆಚಾರ್ಯ, ಟ್ರಸ್ಟ್ ಜೊತೆ ಕಾರ್ಯದರ್ಶಿ ಶ್ರೀಮತಿ ರೂಪಾ ಬಲ್ಲಾಳ್, ಸದಸ್ಯರುಗಳಾದ ಯು. ದಾಮೋದರ್ ಮತ್ತು ರಘುರಾಮ ಆಚಾರ್ಯ; ಎಲ್ಲಾ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯಿನಿಯರು, ಮತ್ತು ಸಿಬ್ಬಂದಿವರ್ಗ ಭಾಗವಹಿಸಿದರು.
ಸ್ವಾತಂತ್ರ್ಯ ದಿನಾಚರಣೆ : ಓಂ ವಿಹಾರ, ಕುಂಜಿಬೆಟ್ಟು
ಪುರುಷೋತ್ತಮ ನಗರದ ಓಂ ವಿಹಾರ ವಸತಿ ಸಮುಚ್ಚಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ನಿವೃತ್ತ ಸೇನಾನಿ ಶ್ರೀ ಬಾಲಚಂದ್ರ ಇವರ ನೇತೃತ್ವದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಳು ಶ್ರೀಮತಿ ವಾಣಿ ಬಾಲಚಂದ್ರ ಧ್ವಜಾರೋಹಣವನ್ನು ನೆರವೇರಿಸಿದರು.
ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪನಾ ಅಧಿಕಾರಿ ಶ್ರೀ ಸಿ.ಕೆ. ಪೈ ಸ್ವಾತಂತ್ರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮವನ್ನು ಶ್ರೀ ಸುಶೀರ್ ರಾವ್ ಕೊಡವೂರು ಮತ್ತು ಮಂಜುನಾಥ್ ನಿರ್ವಹಿಸಿದರು.