ಯಕ್ಷ ಭಾರತಿ( ರಿ) ಬೆಳ್ತಂಗಡಿ ಇದರ ಎಂಟನೇ ವಾರ್ಷಿಕೋತ್ಸವದ ಅಂಗವಾಗಿ ಉಜಿರೆ, ಶ್ರೀ ಶಾರದಾ ಮಂಟಪದಲ್ಲಿ ಭಾನುವಾರ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಮತ್ತು ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವು ನಡೆಯಿತು.
ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪುಷ್ಪಾವತಿ .ಆರ್ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ, ಧರ್ಮಸ್ಥಳ ಆಸ್ಪತ್ರೆಯ ನಿರ್ದೇಶಕರಾದ ಜನಾರ್ದನ.ಆರ್, ಮ್ಯಾನೇಜಿಂಗ್ ಡೈರೆಕ್ಟರ್ ದೇವೇಂದ್ರ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ಮನೋರಮ ಭಟ್, ಉಜಿರೆ ಹವ್ಯಕ ವಲಯದ ಅಧ್ಯಕ್ಷರಾದ ಶ್ಯಾಮ್ ಭಟ್ ಅತ್ತಾಜೆ, ಬೆಳ್ತಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ತುಕಾರಾಂ, ಭಾ.ಜ.ಪ ಕಲೆ ಮತ್ತು ಸಾಂಸ್ಕೃತಿಕ ಸಹ ಸಂಚಾಲಕ ಕಿಶೋರ್ ಶೆಟ್ಟಿ ಮಡಂತ್ಯಾರ್, ಸೌತಡ್ಕ ಶ್ರೀ ಮಹಾ ಗಣಪತಿ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ರಾವ್ , ಶಿತಿ ಕಂಠ ಭಟ್ ಭಾಗವಹಿಸಿ ಶುಭ ಹಾರೈಸಿದರು.
ಯಕ್ಷ ಭಾರತಿ ಅಧ್ಯಕ್ಷರಾದ ರಾಘವೇಂದ್ರ ಬೈಪಡಿತ್ತಾಯ ಸ್ವಾಗತಿಸಿ ಕಾರ್ಯದರ್ಶಿ ದಿವಾಕರ್ ಆಚಾರ್ಯ ಗೇರುಕಟ್ಟೆ ವಂದಿಸಿದರು.
ಕು.ಸಮರ್ಥ ಪ್ರಾರ್ಥಿಸಿದರು. ಯಕ್ಷ ಭಾರತಿ ಸಹ ಕಾರ್ಯದರ್ಶಿ ಶ್ರೀಮತಿ ಭವ್ಯಹೊಳ್ಳ ಕಾರ್ಯಕ್ರಮ ನಿರೂಪಿಸಿದರು.