Saturday, September 21, 2024
Homeಸುದ್ದಿಉತ್ತಮ ಆದರ್ಶದ ಪರಂಪರೆ ಮುಂದುವರಿಯಬೇಕು: ಕಮಲಾದೇವಿ ಪ್ರಸಾದ ಆಸ್ರಣ್ಣ

ಉತ್ತಮ ಆದರ್ಶದ ಪರಂಪರೆ ಮುಂದುವರಿಯಬೇಕು: ಕಮಲಾದೇವಿ ಪ್ರಸಾದ ಆಸ್ರಣ್ಣ

ಭಾರತೀಯ ಸಂಸ್ಕೃತಿಯು ಅತ್ಯಂತ ಪ್ರಾಚೀನ ವಾಗಿದ್ದು ಶ್ರೀರಾಮ, ಶ್ರೀ ಕೃಷ್ಣರಂತಹ ವ್ಯಕ್ತಿತ್ವಗಳ ಆದರ್ಶದ ಪರಂಪರೆಯು ನಮಗೆ ದಾರಿದೀಪವಾಗಿದೆ. ಅದೇ ರೀತಿ ಮುಂದಿನ ಪೀಳಿಗೆಗಾಗಿ ಉತ್ತಮ ಆದರ್ಶಗಳನ್ನು ಆಚರಿಸಿ ತೋರಿಸುವ ಬದ್ಧತೆ ನಮಗಿದೆಯೆಂದು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ
ಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣ ತಿಳಿಸಿದರು.

ಕಟೀಲು ಸೌಂದರ್ಯ ಪ್ಯಾಲೇಸಿನಲ್ಲಿ ದಿನಾಂಕ 13. 8.2022 ರಂದು ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಕೇಂದ್ರ ಸಮಿತಿಯ ಸಭೆ ಮತ್ತು ಶ್ರೀ ದುರ್ಗಾ ನಮಸ್ಕಾರ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಸತ್ಸಂಗವನ್ನು ನಡೆಸಿಕೊಟ್ಟರು. ಗೌರವಾಧ್ಯಕ್ಷ ಎ. ವಿ. ನಾರಾಯಣ ಪ್ರತಿಷ್ಠಾನದ ಕಾರ್ಯ ವಿಸ್ತರಣೆಯ ಮಾಹಿತಿ ನೀಡಿದರು.

ಬಂಟ್ವಾಳ ಘಟಕದ ಅಧ್ಯಕ್ಷ ಸೀತಾರಾಮ ಶೆಟ್ಟಿ, ಮಂಗಳೂರು ದಕ್ಷಿಣ ಘಟಕದ ಅಧ್ಯಕ್ಷ ಭರತ್ ಮೂಡಬಿದ್ರೆ ಘಟಕದ ಕಾರ್ಯದರ್ಶಿ ಸದಾನಂದ ನಾರಾವಿ ,ಪುತ್ತೂರು ಘಟಕದ ಚಂದ್ರಶೇಖರ್ ಆಳ್ವ ಪಡುಮಲೆ ಪ್ರಗತಿಯ ವಿವರ ನೀಡಿದರು.

ರಾಮಕೃಷ್ಣ ನಾಯಕ್ ಕೋಕಳ ಆಸ್ರಣ್ರರನ್ನು ಫಲ ಕಾಣಿಕೆ ಸಮರ್ಪಿಸಿ ಪ್ರತಿಷ್ಠಾನದ ವತಿಯಿಂದ ಗೌರವಿಸಿದರು.

ಸದಸ್ಯರಾದ ಪ್ರೊ .ಶ್ರೀರಾಮ ಕಾರಂತ್ ಮಂಗಳೂರು, ಸುಮಿತ್ರ ಕಾರಂತ್, ಬಾಲಕೃಷ್ಣ ಶೆಟ್ಟಿ, ಗಣೇಶ್ ಆಚಾರ್ಯ ಜೆಪ್ಪು ,ಭವಾನಿ ಶಂಕರ್ ಪುತ್ತೂರು, ಉದಯ ಶಂಕರ ರೈ ಪುಣಚ, ಸೀತಾರಾಮ ಶೆಟ್ಟಿ. ಕೆ ಉಜಿರೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಪ್ರತಿಷ್ಠಾನದ ಉಪಾಧ್ಯಕ್ಷ ಜಯರಾಮ ಭಂಡಾರಿ.ಎಂ ಧರ್ಮಸ್ಥಳ ಸ್ವಾಗತಿಸಿ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ಪ್ರೊ. ವತ್ಸಲಾರಾಜ್ಞಿ ವಂದಿಸಿದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments