ಕುಸ್ತಿಪಟು ದಿವ್ಯಾ ಕಕ್ರನ್ ಅವರಿಗೆ ಸಹಾಯ ಮಾಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾತುಕೊಟ್ಟು ಆಮೇಲೆ ಮಾತು ಮರೆತಿದ್ದಾರೆ.
ಹೀಗೆಂದು ಸ್ವತಃ ದಿವ್ಯಾ ಕಕ್ರನ್ ಅವರೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
“ನಾನು ಏಷ್ಯಾದಲ್ಲಿ ಪದಕ ಗೆದ್ದ ನಂತರ 2017 ರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದೆ, ನಾನು ಅವರಿಗೆ ಲಿಖಿತವಾಗಿ ಪತ್ರವನ್ನು ನೀಡಿದರೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು.
ನಾನು ಹಾಗೆಯೇ ಮಾಡಿದೆ, ಆದರೆ ಅವರು ಅದರ ಬಗ್ಗೆ ಗಮನ ಹರಿಸಲಿಲ್ಲ. ಪ್ರೋತ್ಸಾಹ, ಪ್ರಯಾಣ, ಇತರ ಯಾವುದೇ ವೆಚ್ಚದಲ್ಲಿ ಅವರು ನನಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲಿಲ್ಲ” ಎಂದು ಕಾಮನ್ವೆಲ್ತ್ ಗೇಮ್ಸ್ – 22 ನಲ್ಲಿ ಕಂಚು ಗೆದ್ದ ಕುಸ್ತಿಪಟು ದಿವ್ಯಾ ಕಕ್ರನ್ ಹೇಳಿದ್ದಾರೆ.