ಆದಾಯ ತೆರಿಗೆ ಅಧಿಕಾರಿಗಳಿಂದ ಭರ್ಜರಿ ಬೇಟೆ: ಮಹಾರಾಷ್ಟ್ರದ ಜಲ್ನಾದ ಉಕ್ಕು,ಬಟ್ಟೆ ವ್ಯಾಪಾರಿಯಿಂದ 100 ಕೋಟಿಗೂ ಮಿಕ್ಕಿದ ಆಸ್ತಿ, ಸೊತ್ತು ವಶ. ಹಣ ಎಣಿಸಲು 13 ಘಂಟೆ ಬೇಕಾಯಿತು!
ಆದಾಯ ತೆರಿಗೆ ಇಲಾಖೆ ಇರಿಸಿದ ಬೋನಿಗೆ ಭರ್ಜರಿಯಾದ ಮೃಗವೇ ಬಿದ್ದಿದೆ.
ಮಹಾರಾಷ್ಟ್ರದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಜಲ್ನಾದಲ್ಲಿ ಉಕ್ಕು, ಬಟ್ಟೆ ವ್ಯಾಪಾರಿ ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ನ ಆವರಣದಲ್ಲಿ ಆಗಸ್ಟ್ 1 ರಿಂದ 8ರ ವರೆಗೆ ದಾಳಿ ನಡೆಸಿದರು.
ಈ ದಾಳಿಯಲ್ಲಿ ಸುಮಾರು 100 ಕೋಟಿ ರೂ. ಬೇನಾಮಿ ಆಸ್ತಿಯನ್ನು ವಶಪಡಿಸಿಕೊಂಡಿದೆ. ಅದರಲ್ಲಿ ರೂ 56 ಕೋಟಿ ನಗದು, 32 ಕೆಜಿ ಚಿನ್ನ, ಮುತ್ತುಗಳು-ವಜ್ರಗಳು ಮತ್ತು ಆಸ್ತಿ ಪತ್ರಗಳು ಸೇರಿವೆ.
ವಶಪಡಿಸಿಕೊಂಡ ಹಣವನ್ನು ಎಣಿಸಲು ಸುಮಾರು 13 ಗಂಟೆ ಬೇಕಾಯಿತು. ಮುಂದಿನ ತನಿಖೆ ನಡೆಯುತ್ತಿದೆ.
