ಇದೊಂದು ಅಪರೂಪದ ಘಟನೆ ಹಾಗೂ ಸಾಧನೆ. ಕೇರಳದ ಮಲಪ್ಪುರಂನ 42 ವರ್ಷದ ತಾಯಿ ಮತ್ತು ಅವರ 24 ವರ್ಷದ ಮಗ ಸಾರ್ವಜನಿಕ ಸೇವಾ ಆಯೋಗದ (ಪಿಎಸ್‌ಸಿ) ಪರೀಕ್ಷೆಯಲ್ಲಿ ಒಟ್ಟಿಗೆ ತೇರ್ಗಡೆಯಾಗಿದ್ದಾರೆ.
ತಾಯಿ ಬಿಂದು ಮತ್ತು ಮಗ ವಿವೇಕ್ ಕೇರಳ ಲೋಕಸೇವಾ ಆಯೋಗ (PSC) ನಡೆಸಿದ ಪರೀಕ್ಷೆಯಲ್ಲಿ ಜೊತೆಯಲ್ಲಿಯೇ ತೇರ್ಗಡೆಯಾಗಿದ್ದಾರೆ.
“ನಾವು ಒಟ್ಟಿಗೆ ಕೋಚಿಂಗ್ ತರಗತಿಗಳಿಗೆ ಹೋಗಿದ್ದೇವೆ. ನನ್ನ ತಾಯಿ ನನ್ನನ್ನು ಇದಕ್ಕೆ ಕರೆತಂದರು ಮತ್ತು ನನ್ನ ತಂದೆ ನಮಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದರು. ನಮ್ಮ ಶಿಕ್ಷಕರಿಂದ ನಮಗೆ ಸಾಕಷ್ಟು ಪ್ರೇರಣೆ ಸಿಕ್ಕಿತು.
ನಾವಿಬ್ಬರೂ ಒಟ್ಟಿಗೆ ಓದಿದ್ದೇವೆ ಆದರೆ ನಾವು ಒಟ್ಟಿಗೆ ಅರ್ಹತೆ ಪಡೆಯುತ್ತೇವೆ ಎಂದು ಎಂದಿಗೂ ಯೋಚಿಸಲಿಲ್ಲ. ನಾವು ಇಬ್ಬರಿಗೂ ಈಗ ತುಂಬಾ ಸಂತೋಷವಾಗಿದೆ” ಎಂದು ಬಿಂದುವಿನ ಮಗ ವಿವೇಕ್ ಹೇಳಿದರು.