ಚಿಗುರುಪಾದೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ತಾಳಮದ್ದಳೆ ಸಪ್ತಾಹ ಇಂದಿನಿಂದ ಆರಂಭವಾಗಲಿದೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆಯಲ್ಲಿ ರಾಮಾಯಣ ಮಾಸಾಚರಣೆಯ ಪ್ರಯುಕ್ತ ‘ಯಕ್ಷಚಿಗುರು-2022 – ತಾಳಮದ್ದಳೆ ಸಪ್ತಾಹ’ ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಇಂದು ದಿನಾಂಕ 09.08.2022ನೇ ಮಂಗಳವಾರ ಸಂಜೆ ಘಂಟೆ 4.30ರಿಂದ ಉದ್ಘಾಟನಾ ಸಮಾರಂಭ ನೆರವೇರಲಿದೆ. ಈ ಸಪ್ತಾಹ 09.08.2022ರಿಂದ ಮೊದಲುಗೊಂಡು 15.08.2022ರ ತನಕ ನಡೆಯಲಿದೆ. ಪ್ರತಿದಿನವೂ ವಿವಿಧ ಪ್ರಸಂಗಗಳ ತಾಳಮದ್ದಳೆ ಕೂಟ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕೊನೆಯ ದಿನ ಅಂದರೆ 15.08.2022ರಂದು ಸಮಾರೋಪ ಸಮಾರಂಭದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಸಂಸ್ಥೆಗೆ ‘ಯಕ್ಷಚಿಗುರು’ ಗೌರವಾರ್ಪಣೆ ನಡೆಯಲಿದೆ. ವಿವರಗಳಿಗೆ ಚಿತ್ರ ನೋಡಿ.

