ಶಾಲಾ ವಾಹನ ಹೊಳೆಗೆ ಬಿದ್ದು ಅಫಘಾತವಾಗಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ನಾಗ್ಪುರ್, ಮಹಾರಾಷ್ಟ್ರ | ನಾಗ್ಪುರದ ಬೆಸಾ ಘೋಗ್ಲಿ ರಸ್ತೆಯಲ್ಲಿ ಶಾಲಾ ವ್ಯಾನ್ ಅಪಘಾತಕ್ಕೀಡಾಗಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ವ್ಯಾನ್‌ನಲ್ಲಿ 16 ಮಕ್ಕಳಿದ್ದರು. ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಚಾಲಕನನ್ನು ಬಂಧಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.