ಕೃಷ್ಣ ಹಾಗೂ ಅವನ ಹೆಂಡಂದಿರಾದ ಸತ್ಯಭಾಮೆ ಹಾಗೂ ರುಕ್ಮಿಣಿಯರ ನಡುವೆ ನಾರದರ ಕುಮ್ಮಕ್ಕಿನಿಂದ ಉಂಟಾಗುವ ಭಿನ್ನಾಭಿಪ್ರಾಯಗಳನ್ನು ನವಿರಾದ ಹಾಸ್ಯ ಘಟನೆಗಳೊಂದಿಗೆ ಸಾಂಸಾರಿಕ ಸಾಮರಸ್ಯದ ಪಾಠವನ್ನು ಪ್ರಕಟಪಡಿಸಿದ ಭಾಮ ಕಲಾಪ ಯಕ್ಷಗಾನವು ನೆರೆದ ಪ್ರೇಕ್ಷಕರ ಮನಸೂರೆಗೊಂಡಿತು.
ಕರಬ ಪ್ರತಿಷ್ಠಾನ ಸಂಸ್ಥೆಯು ತನ್ನ ವಾರ್ಷಿಕೋತ್ಸವದ ಅಂಗವಾಗಿ ಕಲೋತ್ಸವ 2022 ರ ಅಡಿಯಲ್ಲಿ ನಿನ್ನೆ ಸಂಜೆ ವಿಶ್ವೇಶ್ವರಯ್ಯ ಬಡಾವಣೆಯ 4 ನೇ ವಿಭಾಗದ ಕಲಾಗುಡಿ ವೇದಿಕೆಯಲ್ಲಿ ಡಾ.ರಾಧಾಕೃಷ್ಣ ಉರಾಳರ ನಿರ್ದೇಶನದಲ್ಲಿ ಗುಡಿ ನಡೆ ಶೀರ್ಷಿಕೆ ಮೂಲಕ ಕಲಾಕದಂಬ ಆರ್ಟ್ ಸೆಂಟರ್ ಕಲಾವಿದರು ಅಭಿನಯಿಸಿದ ಈ ಭಾಮ ಕಲಾಪ ಸಾಮರಸ್ಯವೇ ಜೀವನ ಎನ್ನುವ ಮಹತ್ವವನ್ನು ಸಾರಿತು.
ಈ ಒಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಬ್ಯಾಂಕ್ ರಾಮಸಂದ್ರದ ಶಾಖೆಯ ಮೆನೇಜರ್ ಶ್ರೀ ರಾಘವೇಂದ್ರ ಕಾಮತ್ ರವರು ಯಕ್ಷಗಾನ ಕಲೆಯು ನಮ್ಮ ನಾಡಿನ ಪಾರಂಪರಿಕ ಕಲೆ ಇಂತಹ ಕಲೆಯ ಜೀವಂತಿಕೆಗಾಗಿ ಕಲಾಕದಂಬ ಆರ್ಟ್ ಸೆಂಟರ್ ಸಾಕಷ್ಟು ಕೆಲಸಗಳನ್ನು ಇಂತಹ ಅರ್ಥಪೂರ್ಣ ಪ್ರಸಂಗಗಳನ್ನು ಪ್ರದರ್ಶಿಸುವುದರ ಮೂಲಕ ಮಾಡುತ್ತಿದೆ.
ಅಲ್ಲದೆ ಇಂದಿನ ಜನಾಂಗಕ್ಕೆ ಯಕ್ಷಗಾನವನ್ನು ಕಲಿಸಿ ಅವರಲ್ಲಿ ಯಕ್ಷಗಾನದ ಆಸಕ್ತಿಯನ್ನು ಬೆಳೆಸುತ್ತಿದೆ ಇದು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು ಅಲ್ಲದೇ ಕರಬ ಪ್ರತಿಷ್ಠಾನವು ತನ್ನ ವಾರ್ಷಿಕೋತ್ಸವವನ್ನು ಯಕ್ಷಗಾನ ಪ್ರದರ್ಶನದ ಮೂಲಕ ಆಚರಿಸಿ ಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ನಿವೃತ್ತ ಇಂಜಿನಿಯರ್ ಹೆಚ್.ಎಸ್,ಹಂದೆ ಶಿವಳ್ಳ ಸ್ಮಾರ್ತ ವೇದಿಕೆಯ ಸದಸ್ಯರಾದ ಆನಂದ ಬಾಯಿರಿ, ಕರಬ ಪ್ರತಿಷ್ಠಾನದ ಅಧ್ಯಕ್ಷರಾದ ದೇವರಾಜ ಕರಬರು ಉಪಸ್ಥಿತರಿದ್ದರು.
ಕೃಷ್ಣನ ಪಾತ್ರದ ಮಧುಮಿತ, ಸತ್ಯಭಾಮೆಯಾಗಿ ಅದಿತಿ ಉರಾಳ, ರುಕ್ಮಿಣಿಯಾಗಿ ಚಿರಾಗ್ ನಾರದನ ಪಾತ್ರದಲ್ಲಿ ಅನೀಶ್, ಬಾಲಗೋಪಾಲ ಹಾಗೂ ಸೂತ್ರಧಾರರಾಗಿ ನಿತ್ಯಾಗೌಡ,ಅನ್ವಿತ, ಚಿತ್ಕಲ ,ಸಂಹಿತ್ ಬಾಯಿರಿ,ಅಪ್ರಮೇಯ ಹಾಗೂ ಅಭಿರಾಮ್ ತಮ್ಮ ಕುಣಿತ ಹಾಗೂ ಅಭಿನಯದ ಮೂಲಕ ಗಮನ ಸೆಳೆದರು.
ಯಕ್ಷಗಾನವಲ್ಲದೇ ಕಿರು ನಾಟಕ ಹಾಗೂ ಸುಗಮ ಸಂಗೀತ ಗಾಯನ ಕಾರ್ಯಕ್ರಮವನ್ನು ಕಲಾ ಕದಂಬ ಆರ್ಟ್ ಸೆಂಟರ್ ವಿದ್ಯಾರ್ಥಿಗಳು ನಡೆಸಿಕೊಟ್ಟರು. ವಿಶ್ವನಾಥ ಉರಾಳ, ಮುರಳೀಧರ ನಾವಡ ಹಾಗೂ ಸುಹಾಸ್ ನೇಪಥ್ಯದಲ್ಲಿ ಸಹಕರಿಸಿದರು.
ಈ ಒಂದು ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯು ಪ್ರಾಯೋಜಿಸುವುದರ ಮೂಲಕ ಪ್ರೋತ್ಸಾಹಿಸಿತು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions