ಧರ್ಮಸ್ಥಳ ಕನ್ಯಾಡಿ ಶ್ರೀ ಗುರುದೇವ ಮಠದಲ್ಲಿ ಚಾತುರ್ಮಾಸ್ಯ ವೃತಾನುಷ್ಠಾನದಲ್ಲಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಯಕ್ಷ ಭಾರತಿ (ರಿ) ಬೆಳ್ತಂಗಡಿ ಪದಾಧಿಕಾರಿಗಳು ಭೇಟಿ ಮಾಡಿ ಗುರು ನಮನ ಸಲ್ಲಿಸಿದರು.
ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಉಜಿರೆ, ಕಾರ್ಯದರ್ಶಿ ದಿವಾಕರ್ ಆಚಾರ್ಯ ಗೇರುಕಟ್ಟೆ, ಸಂಚಾಲಕ ಮಹೇಶ್ ಕನ್ಯಾಡಿ, ಟ್ರಸ್ಟಿ ವಿದ್ಯಾಕುಮಾರ್ ಕಾಂಚೋಡು ಇವರನ್ನು ಸ್ವಾಮೀಜಿಯವರು ಪ್ರಸಾದ ಮಂತ್ರಾಕ್ಷತೆಯೊಂದಿಗೆ ಗೌರವಿಸಿದರು.
ಯಕ್ಷ ಭಾರತಿ ಎಂಟನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಸ್ವಾಮೀಜಿಯವರಿಗೆ ಗೌರವಪೂರ್ವಕವಾಗಿ ನೀಡಲಾಯಿತು.