Sunday, January 19, 2025
Homeಸುದ್ದಿವಿವೇಕಾನಂದ ಆಂಗ್ಲ  ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ವಿವೇಕಾನಂದ ಇಂಟರಾಕ್ಟ್ ಕ್ಲಬ್ ಪುತ್ತೂರು ಪೂರ್ವ ಇದರ...

ವಿವೇಕಾನಂದ ಆಂಗ್ಲ  ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ವಿವೇಕಾನಂದ ಇಂಟರಾಕ್ಟ್ ಕ್ಲಬ್ ಪುತ್ತೂರು ಪೂರ್ವ ಇದರ ಪದಗ್ರಹಣ ಸಮಾರಂಭ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ವಿವೇಕಾನಂದ ಇಂಟರಾಕ್ಟ್ ಕ್ಲಬ್   ಪುತ್ತೂರು ಪೂರ್ವ ಇದರ ಪದಗ್ರಹಣ ಸಮಾರಂಭವು ದಿನಾಂಕ 03-08-2022ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.


Installing Officer ಆಗಿ ರೋ.ಚಂದ್ರಶೇಖರ್.ಎಸ್ ಅವರು ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. 10ನೇ ತರಗತಿಯ ಕು.ತನ್ವಿ ಶೆಣೈ ವಿವೇಕಾನಂದ  ಇಂಟರಾಕ್ಟ್ ಕ್ಲಬ್  ನ ಅಧ್ಯಕ್ಷೆಯಾಗಿ ಹಾಗೂ 10ನೇ ತರಗತಿಯ ಧನ್ವಿನ್.ಕೆ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. ಸುಮಾರು 35 ವಿದ್ಯಾರ್ಥಿಗಳು  ಇಂಟರಾಕ್ಟ್ ಕ್ಲಬ್  ನ ಸದಸ್ಯರಾಗಿ ಸೇರ್ಪಡೆಯಾದರು.

ರೋ.ಚಂದ್ರಶೇಖರ್.ಎಸ್. Installing Officer ನ ನೆಲೆಯಲ್ಲಿ ಮಾತನಾಡಿ, ನೂತನ ವಿವೇಕಾನಂದ ಇಂಟರಾಕ್ಟ್ ಕ್ಲಬ್‌ಗೆ ಹಾಗೂ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ರೋಟರಿ ಅಸಿಸ್ಟೆಂಟ್ ಗವರ್ನರ್ ರೋ.ಜಗಜೀವನದಾಸ್ ರೈ ರೋಟರಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿ ಶುಭ ಹಾರೈಸಿದರು.


ನೂತನ ವಿವೇಕಾನಂದ  ಇಂಟರಾಕ್ಟ್ ಕ್ಲಬ್  ನ ಅಧ್ಯಕ್ಷೆ ಕು.ತನ್ವಿ ಶೆಣೈ ಮಾತನಾಡಿ ತನ್ನ ನೂತನ ಕಾರ್ಯಯೋಜನೆಗಳ ಬಗ್ಗೆ ತಿಳಿಸಿದಳು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶಿವಪ್ರಕಾಶ್.ಎಂ ಹಾಗೂ ಸಂಚಾಲಕ ಶ್ರೀ ರವಿನಾರಾಯಣ.ಎಂ ಸಂದರ್ಭೋಚಿತವಾಗಿ ಮಾತನಾಡಿದರು. ವಿವೇಕಾನಂದ  ಇಂಟರಾಕ್ಟ್ ಕ್ಲಬ್  ನ ಸಂಯೋಜಕಿ ಶ್ರೀಮತಿ ಶಾಂತಿರಾವ್ ಇವರು ಕ್ಲಬ್‌ನ ಉದ್ಧೇಶ ಹಾಗೂ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ರೋ. ಶಶಿಧರ್ ಕಿನ್ನಿಮಜಲು ಮತ್ತು ರೋ.ಶಶಿಕಿರಣ ರೈ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಪುತ್ತೂರು ಪೂರ್ವ ಹಾಗೂ ವಿವೇಕಾನಂದ  ಇಂಟರಾಕ್ಟ್ ಕ್ಲಬ್  ನ ಸಹಯೋಗದೊಂದಿಗೆ ಶಾಲಾ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮವು ನಡೆಯಿತು. ರೋ.ಕೆ.ವಿಶ್ವಾಸ ಶೆಣೈ ಮತ್ತು ರೋಟರಿ ಕ್ಲಬ್ ಪುತ್ತೂರು ಪೂರ್ವದ ಸದಸ್ಯರು ಮತ್ತು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು.


ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷರಾದ ಶ್ರೀ ಶರತ್‌ಕುಮಾರ್ ರೈ ಅವರು ಸ್ವಾಗತಿಸಿ, ಕು. ತೇಜ ಚಿನ್ಮಯ ಹೊಳ್ಳ ಪ್ರಾರ್ಥಿಸಿ, ಕಾರ್ಯದರ್ಶಿ ಕು.ಧನ್ವಿನ್.ಕೆ ವಂದಿಸಿದನು. ಕು.ಶುಭನ್ ಶೆಣೈ ಮತ್ತು ಕು.ನೇಹಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments