ದಕ್ಷಿಣ ಕನ್ನಡದಲ್ಲಿ ಹೊಸ ಸಂಚಾರೀ ನಿಯಮ ಹೊಸ ಸಂಚಾರೀ ನಿಯಮ ಜಾರಿಗೆ ತರಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಪುರುಷರಿಗೆ ಹಿಂದುಗಡೆ ಕುಳಿತುಕೊಳ್ಳಲು ಅವಕಾಶ ಇಲ್ಲ.
ಆದರೆ ಹಿರಿಯ ನಾಗರಿಕರು, ಮಕ್ಕಳು ಮತ್ತು ಮಹಿಳೆಯರಿಗೆ ಅವಕಾಶ ಇರುತ್ತದೆ.
ಅಂದರೆ 18 ವರ್ಷದ ಕೆಳಗಿನವರು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಹಿಂದುಗಡೆ ಕುಳಿತು ಪ್ರಯಾಣಿಸಬಹುದು.
“ಇತ್ತೀಚಿಗೆ ನಡೆದ ಅಪರಾಧ ಕೃತ್ಯಗಳಲ್ಲಿ ಹಿಂದುಗಡೆ ಸವಾರರೇ ಕೃತ್ಯ ಎಸಗಿರುವುದನ್ನು ಗಮನದಲ್ಲಿರಿಸಿ ಈ ಬದಲಾವಣೆ ಮಾಡಲಾಗಿದೆ. ಈ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಈ ಕ್ರಮ ತೆಗೆದುಕೊಳ್ಳಲಾಗುವುದು.
ಕೆಲವು ಇತರ ರಾಜ್ಯಗಳಲ್ಲಿ ಈ ಕ್ರಮ ಈಗಾಗಲೇ ಜಾರಿಯಲ್ಲಿದೆ. ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದನ್ನು ಜಾರಿಗೊಳಿಸಲಾಗುತ್ತದೆ. ವಯಸ್ಕ ಪುರುಷರಿಗೆ ಮಾತ್ರ ನಿರ್ಬಂಧ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.