ಯಕ್ಷಗಾನ ಹಾಸ್ಯ ಕಲಾವಿದ ಸಚ್ಚಿದಾನಂದ ಪ್ರಭು ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸನ್ಮಾನದ ಗೌರವ ಲಭಿಸಿದೆ. ಇತ್ತೀಚಿಗೆ ತುಳು ಯಕ್ಷ ಜಾತ್ರೆ ಎಂಬ ಕಾರ್ಯಕ್ರಮದಲ್ಲಿ ಅವರು ಈ ಗೌರವಕ್ಕೆ ಪಾತ್ರರಾದರು.
ಮಂಗಳೂರಿನಲ್ಲಿ ದಿನಾಂಕ 30.07.2022ರಿಂದ ಆರಂಭವಾದ ತುಳು ಯಕ್ಷ ಜಾತ್ರೆ 10.08.2022 ವರೆಗೆ ನಡೆಯಲಿದೆ.
ಮಂಗಳೂರಿನ ಅಶೋಕನಗರದ ತುಳು ಭವನದಲ್ಲಿ ನಡೆಯುವ 12 ದಿನಗಳ ತುಳು ಯಕ್ಷಗಾನ ಜಾತ್ರೆಯಲ್ಲಿ ಪ್ರತಿದಿನವೂ ಒಂದೊಂದು ತುಳು ಯಕ್ಷಗಾನ ಪ್ರದರ್ಶನಗಳನ್ನು ಪ್ರದರ್ಶಿಸಲಾಗುತ್ತಿದೆ.
ಈ ತುಳು ಯಕ್ಷ ಜಾತ್ರೆ ಸಂದರ್ಭದಲ್ಲಿ ಶ್ರೀ ಸಚ್ಚಿದಾನಂದ ಪ್ರಭು ಅವರು ಯಕ್ಷಗಾನ ರಂಗದಲ್ಲಿ ಸಲ್ಲಿಸಿದ ಸೇವೆ ಹಾಗೂ ತನ್ಮೂಲಕ ಅವರು ತುಳು ಭಾಷೆಯ ಬೆಳವಣಿಗೆಗೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.