ರಾಜ್ಯಸಭಾ ಸದಸ್ಯರಾಗಿ ನಿಯುಕ್ತರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಇವರನ್ನು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಮೆಲ್ಕಾರ್ ಬಂಟ್ವಾಳ ವತಿಯಿಂದ ದಿನಾಂಕ 1.8.2022 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ಅಭಿನಂದಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷರಾದ ಕೈಯೂರು ನಾರಾಯಣ ಭಟ್, ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ,ಸಹ ಸಂಚಾಲಕ ಭಾಸ್ಕರ ಬಾರ್ಯ, ಉಪಾಧ್ಯಕ್ಷರಾದ ಜಯರಾಮ ಭಂಡಾರಿ ಧರ್ಮಸ್ಥಳ, ಅನಂತ ಪ್ರಭು ನೇರಳಕಟ್ಟೆ, ಜಗದೀಶ ಅಧಿಕಾರಿ ಮೂಡಬಿದ್ರೆ, ಸೀತಾರಾಮ ಶೆಟ್ಟಿ ಉಜಿರೆ, ರಾಧಾಕೃಷ್ಣರಾವ್ ಧರ್ಮಸ್ಥಳ ,ಭವಾನಿ ಶಂಕರ್ ಪುತ್ತೂರು ರಾಮಕೃಷ್ಣ ನಾಯಕ್ ಕೋಕಳ, ಚಂದ್ರಶೇಖರ ಆಳ್ವ ಪುತ್ತೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.