ನಾಳೆ 03.08.2022ರ ಬುಧವಾರ ಮಧ್ಯಾಹ್ನ 2.30 ಘಂಟೆಗೆ ಮಂಗಳೂರಿನ ತುಳು ಯಕ್ಷ ಜಾತ್ರೆಯಲ್ಲಿ ಯಕ್ಷಗಾನ ಕಲಾವಿದರಾದ ಗಣೇಶ ಪಾಲೆಚ್ಚಾರ್ ನಿರ್ದೇಶನ ಹಾಗೂ ಸಂಯೋಜನೆಯಲ್ಲಿ ‘ ಕನಕಾಂಗಿ ಕಲ್ಯಾಣ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮಂಗಳೂರಿನಲ್ಲಿ ದಿನಾಂಕ 30.07.2022ರಿಂದ ಆರಂಭವಾದ ತುಳು ಯಕ್ಷ ಜಾತ್ರೆ 10.08.2022 ವರೆಗೆ ನಡೆಯಲಿದೆ.
ಮಂಗಳೂರಿನ ಅಶೋಕನಗರದ ತುಳು ಭವನದಲ್ಲಿ ನಡೆಯುವ 12 ದಿನಗಳ ತುಳು ಯಕ್ಷಗಾನ ಜಾತ್ರೆಯಲ್ಲಿ ಪ್ರತಿದಿನವೂ ಒಂದೊಂದು ತುಳು ಯಕ್ಷಗಾನ ಪ್ರದರ್ಶನಗಳನ್ನು ಪ್ರದರ್ಶಿಸಲಾಗುತ್ತಿದೆ.
ನಾಳೆ ಅಂದರೆ 03.08.2022ರ ಬುಧವಾರ ಮಧ್ಯಾಹ್ನ 2.30 ಘಂಟೆಗೆ ಯಕ್ಷಗಾನ ಕಲಾವಿದರಾದ ಗಣೇಶ ಪಾಲೆಚ್ಚಾರ್ ನಿರ್ದೇಶನ ಹಾಗೂ ಸಂಯೋಜನೆಯಲ್ಲಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಪುತ್ತೂರು ಇವರಿಂದ ‘ ಕನಕಾಂಗಿ ಕಲ್ಯಾಣ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಕಾರ್ಯಕ್ರಮವು ಪ್ರತಿದಿನ ಮಧ್ಯಾಹ್ನ 2.30 ಘಂಟೆಗೆ ಆರಂಭವಾಗಲಿದೆ.
ವಿವರಗಳಿಗೆ ಕಾರ್ಯಕ್ರಮದ ಕರಪತ್ರದ ಚಿತ್ರವನ್ನು ನೋಡಿ.
