Saturday, January 18, 2025
Homeಸುದ್ದಿಬಾಲಕನ ಜೀವನದ ಕೊನೆಯ ಆಸೆಯಂತೆ ಫ್ರೆಂಡ್ ಶಿಪ್ ಬೆಲ್ಟ್ ಕಟ್ಟಿದ ಶಾಲೆಯ ಎಲ್ಲ ಸ್ನೇಹಿತರು: ಮರುದಿನವೇ...

ಬಾಲಕನ ಜೀವನದ ಕೊನೆಯ ಆಸೆಯಂತೆ ಫ್ರೆಂಡ್ ಶಿಪ್ ಬೆಲ್ಟ್ ಕಟ್ಟಿದ ಶಾಲೆಯ ಎಲ್ಲ ಸ್ನೇಹಿತರು: ಮರುದಿನವೇ ಬಾರದ ಲೋಕಕ್ಕೆ ಪಯಣಿಸಿದ ಬಾಲಕ – ಕೊಪ್ಪಳದಲ್ಲೊಂದು ಮನ ಕಲಕುವ ಘಟನೆ 

ಕೆಲವೊಮ್ಮೆ ಜೀವನ ಎನ್ನುವುದು ಎಷ್ಟು ದುಃಖದಾಯಕವಾದದ್ದು ಎಂದು ಕೆಲವೊಂದು ಮನಕಲಕುವ ಘಟನೆಗಳನ್ನು ನೋಡಿದಾಗ ಅರಿವಾಗುತ್ತದೆ. ಸುಖದ ಹಿಂದೆಯೇ ದುಃಖವು ಹೊಂಚುಹಾಕಿ ಕಾದು ಕುಳಿತಿರುತ್ತದೆ.

ಕೊಪ್ಪಳದಲ್ಲೊಂದು ಇಂತಹುದೇ ಕರುಣಾಜನಕ ಘಟನೆ ನಡೆದಿದೆ. ಮರಣವು ಸನ್ನಿಹಿತವಾಗುವ ಕಾಲಕ್ಕೆ ಬಾಲಕನು ತನ್ನ ಸ್ನೇಹಿತರಿಂದ ಫ್ರೆಂಡ್ ಶಿಪ್ ಬೆಲ್ಟ್ ಕಟ್ಟಿಸಿಕೊಳ್ಳಲು ಬಯಸಿದ.  ಕಟ್ಟಿಸಿಕೊಂಡ ಮರುದಿನವೇ ಕೊನೆಯುಸಿರೆಳೆದ. 

ಮೃತ ಹುಡುಗನನ್ನು ಸುಹಾಸ್ ಸೌದ್ರಿ ಎಂದು ಗುರುತಿಸಲಾಗಿದೆ. ಕಾರಟಗಿ ಪಟ್ಟಣ ನಿವಾಸಿ ಸುಹಾಸ್ ಸೌದ್ರಿ ಸಣ್ಣ ಪ್ರಾಯದಿಂದಲೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ.

ಆತನು ಕಾರಟಗಿಯ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ. ಆದರೆ ಕಳೆದ ಒಂದು ತಿಂಗಳಿಂದ ಆತನ ಆರೋಗ್ಯ ಹದಗೆಟ್ಟಿತ್ತು. ಇದರಿಂದಾಗಿ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ತೀವ್ರ ಅನಾರೋಗ್ಯದ ನಡುವೆಯೂ ಸುಹಾಸ್ ತನ್ನ ಶಾಲೆ ಮತ್ತು ಸ್ನೇಹಿತರನ್ನು ನೋಡಲು ಬಯಸಿದ. ತನ್ನ ಮಗನ ಕೊನೆ ಆಸೆ ಈಡೇರಿಸಲು ತಂದೆ ತಾಯಿ ಶಾಲೆಗೆ ಕರೆದುಕೊಂಡು ಹೋದರು.   

ಶಾಲಾ ಆವರಣದಲ್ಲಿ ಕಾರಿನಲ್ಲಿ ಚಿತಾಜನಕ ಸ್ಥಿತಿಯಲ್ಲಿದ್ದ  ಆತನನ್ನು ನೋಡಿ ಎಲ್ಲ ಮಕ್ಕಳು ಶಿಕ್ಷಕರು ಬಿಕ್ಕಿ ಬಿಕ್ಕಿ ಅತ್ತರು. ಅಳುತ್ತಲೇ ಎಲ್ಲರೂ ಫ್ರೆಂಡ್‍ಶಿಪ್ ಬೆಲ್ಟ್ ಕಟ್ಟಿದ್ದರು. ಆದರೆ ಮೊನ್ನೆ ಫ್ರೆಂಡ್ ಶಿಪ್ ಬೆಲ್ಟ್ ಕಟ್ಟಿಸಿಕೊಂಡ ಆತ ನಿನ್ನ ಮೃತಪಟ್ಟಿದ್ದಾನೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments