ಜಮ್ಮು ಕಾಶ್ಮೀರದಲ್ಲಿ ಇಂದು ಎಲ್ ಇ ಟಿ ಯ ಇಬ್ಬರು ಕುಖ್ಯಾತ ಭಯೋತ್ಪಾದಕರನ್ನು ಬಂಧಿಸಲಾಗಿದೆ.
ಎಲ್ಇಟಿಯ ಇಬ್ಬರು ಹೈಬ್ರಿಡ್ ಭಯೋತ್ಪಾದಕರು, ತಾರಿಕ್ ಅಹ್ ವಾನಿ ಮತ್ತು ಇಶ್ಫಾಕ್ ಅಹ್ ವಾನಿ, ಹಡಿಪೋರಾ ರಫಿಯಾಬಾದ್‌ನಲ್ಲಿನ ಚೆಕ್ ಪಾಯಿಂಟ್‌ನಿಂದ ಓಡಿಹೋದ ನಂತರ ಸೋಪೋರ್ ಪೊಲೀಸರು ಬೆನ್ನಟ್ಟಿ ಬಂಧಿಸಿದರು.
ಎರಡು ಪಿಸ್ತೂಲ್‌ಗಳು, ಎರಡು ಪಿಸ್ತೂಲ್ ಮ್ಯಾಗಜೀನ್‌ಗಳು ಮತ್ತು 11 ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ;
ಈ ಎರಡೂ ಉಗ್ರವಾದಿಗಳನ್ನು ತೀವ್ರವಾಗಿ ತನಿಖೆಗೆ ಒಳಪಡಿಸಲಾಗುತ್ತಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.