ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ದ.ಕ.ಜಿ.ಪಂ.ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ಮತ್ತು ದ.ಕ.ಜಿ.ಪಂ.ಸರಕಾರಿ ಪ್ರೌಢ ಶಾಲೆ ನ್ಯೂಪಡ್ಪು, ಹರೇಕಳ ಇದರ ಆಶ್ರಯದಲ್ಲಿ ಜುಲೈ23ರಂದು ಮಂಗಳೂರು ವಿಶ್ವವಿದ್ಯಾನಿಲಯದ ಒಳಾಂಗಣ ಕ್ರೀಡಾಂಗಣ, ಕೊಣಾಜೆ ಇಲ್ಲಿ ನಡೆದ ಜಿಲ್ಲಾಮಟ್ಟದ ಪ್ರಾಥಮಿಕ U-14 ವಯೋಮಾನ ವರ್ಗದ ಬಾಲಕಿಯರ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪುತ್ತೂರು ತಾಲೂಕು ದ್ವಿತೀಯ ಸ್ಥಾನ ಗಳಿಸಿರುತ್ತದೆ.
ಈ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ಸಮನ್ವಿತಾ. ಕೆ(ವಿನ್ಯಾಸ್ ಕನ್ಸ್ಟ್ರ ಕ್ಷಷನ್ ಮಾಲಕ ಬಪ್ಪಳಿಗೆಯ ಕಿಶೋರ್ ಕುಮಾರ್ ಮತ್ತು ರೂಪಶ್ರೀ. ಕೆ. ರವರ ಪುತ್ರಿ), ಡಿ. ಹರ್ಷ (ಚಿಕ್ಕಪುತ್ತೂರಿನ ಶಿವಕುಮಾರ್ ಮತ್ತು ಎಸ್. ಪೋನ್ನಿ ಅವರ ಪುತ್ರಿ) ಇವರುಗಳು ಪುತ್ತೂರು ತಾಲೂಕನ್ನು ಪ್ರತಿನಿಧಿಸಿರುತ್ತಾರೆ.
ಇದರಲ್ಲಿ 8ನೇ ತರಗತಿಯ ಸಮನ್ವಿತಾ. ಕೆ ಇವರು ಅಕ್ಟೋಬರ್ ದಲ್ಲಿ ಚಾಮರಾಜನಗರ, ಮೈಸೂರು ಜಿಲ್ಲೆ ಇಲ್ಲಿ ನಡೆಯುವ ವಿಭಾಗಮಟ್ಟದ ಸ್ಪರ್ಧೆಯಲ್ಲಿ ದಕ್ಷಿಣ ಜಿಲ್ಲೆಯನ್ನು ಪ್ರತಿನಿಧಿಸಿ, ಭಾಗವಹಿಸಲಿದ್ದಾಳೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.