ಉಜಿರೆಯಲ್ಲಿ ನಡೆಯುತ್ತಿರುವ ಯಕ್ಷ ಸಪ್ತಾಹದ ಏಳು ದಿನಗಳಲ್ಲಿ ಇಂದು ಕೊನೆಯ ದಿನ.
ಕೊನೆಯ ದಿನವಾದ ಇಂದು ಯಕ್ಷನೃತ್ಯ ಕಾರ್ಯಕ್ರಮ ನಡೆಯಲಿದೆ.
ಇಂದು ‘ಯಕ್ಷಾವತರಣ – ಯಕ್ಷನೃತ್ಯ’ ಎಂಬ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳ ಯೂಟ್ಯೂಬ್ ನೇರ ಪ್ರಸಾರ ಲಭ್ಯವಿದೆ.
ಬೆಳ್ತಂಗಡಿಯ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದಲ್ಲಿ ಕಾರ್ಯಕ್ರಮ ನಡೆಯಲಿದೆ.
ಜುಲೈ 29 ರಂದು ಸಂಜೆ 5.45 ಗಂಟೆಗೆ – ‘ಯಕ್ಷಾವತರಣ – ಯಕ್ಷನೃತ್ಯ’
ಹಿಮ್ಮೇಳ: ಪುತ್ತಿಗೆ ರಘುರಾಮ ಹೊಳ್ಳ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಚೈತನ್ಯಕೃಷ್ಣ ಪದ್ಯಾಣ, ಎಲ್ಲೂರು ರಾಮಚಂದ್ರ ಭಟ್
ಮುಮ್ಮೇಳ: ರಂಜಿತಾ ಎಲ್ಲೂರು, ರಕ್ಷಿತಾ ಎಲ್ಲೂರು ಮತ್ತು ಬಳಗ
ನೇರಪ್ರಸಾರ ಯೂಪ್ಲಸ್ ಟಿವಿ, ಯೂಟ್ಯೂಬ್ ಹಾಗೂ ಫೇಸ್ಬುಕ್ ನಲ್ಲಿ
