Saturday, January 18, 2025
Homeಇಂದಿನ ಕಾರ್ಯಕ್ರಮಇಂದಿನಿಂದ ಶ್ರೀ ಎಡನೀರು ಮಠದಲ್ಲಿ ‘ಶ್ರೀಕೃಷ್ಣಚರಿತಾಮೃತಮ್’ ತಾಳಮದ್ದಳೆ ಸಪ್ತಾಹ - ಇಂದು ‘ರುಕ್ಮಿಣಿ ಸ್ವಯಂವರ’

ಇಂದಿನಿಂದ ಶ್ರೀ ಎಡನೀರು ಮಠದಲ್ಲಿ ‘ಶ್ರೀಕೃಷ್ಣಚರಿತಾಮೃತಮ್’ ತಾಳಮದ್ದಳೆ ಸಪ್ತಾಹ – ಇಂದು ‘ರುಕ್ಮಿಣಿ ಸ್ವಯಂವರ’

ಇಂದಿನಿಂದ ಶ್ರೀ ಎಡನೀರು ಮಠದಲ್ಲಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ ಇವರು ಆಯೋಜಿಸುತ್ತಿರುವ ಯಕ್ಷಗಾನ ತಾಳಮದ್ದಳೆ ಸಪ್ತಾಹ ನಡೆಯಲಿದೆ.

‘ಶ್ರೀಕೃಷ್ಣಚರಿತಾಮೃತಮ್’ ಎಂಬ ತಾಳಮದ್ದಳೆ ಸಪ್ತಾಹ 29.07.2022 ಶುಕ್ರವಾರದಿಂದ 04.08.2022 ಗುರುವಾರದ ತನಕ ನಡೆಯಲಿದೆ. ಪ್ರತಿದಿನವೂ ಶ್ರೀಕೃಷ್ಣನ ಕುರಿತಾದ ಪ್ರಸಂಗಗಳ ತಾಳಮದ್ದಳೆ ನಡೆಯಲಿದೆ. 

ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ದ್ವಿತೀಯ ಚಾತುರ್ಮಾಸ್ಯದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಈ ಯಕ್ಷಗಾನ ಪ್ರದರ್ಶನ ಜರಗಲಿದೆ.

ಪ್ರತಿದಿನ ಸಂಜೆ ಘಂಟೆ 6ಕ್ಕೆ ಸರಿಯಾಗಿ ತಾಳಮದ್ದಳೆ ಪ್ರದರ್ಶನ ಆರಂಭವಾಗಲಿದೆ. ಇಂದು 29.07.2022 ಶುಕ್ರವಾರ ‘ರುಕ್ಮಿಣಿ ಸ್ವಯಂವರ’ ಎಂಬ ಪ್ರಸಂಗದ ತಾಳಮದ್ದಳೆ ಕೂಟ ಜರಗಲಿದೆ. 

ವಿವರಗಳಿಗೆ ಚಿತ್ರ ನೋಡಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments