Saturday, January 18, 2025
Homeಯಕ್ಷಗಾನಎಡನೀರಿನಲ್ಲಿ ರಂಜಿಸಿದ ಸಿರಿಬಾಗಿಲು ಪ್ರತಿಷ್ಠಾನದ ಯಕ್ಷಗಾನ 'ನಾಗೋದ್ಧರಣ' 

ಎಡನೀರಿನಲ್ಲಿ ರಂಜಿಸಿದ ಸಿರಿಬಾಗಿಲು ಪ್ರತಿಷ್ಠಾನದ ಯಕ್ಷಗಾನ ‘ನಾಗೋದ್ಧರಣ’ 

ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ , ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದ್ವಿತೀಯ ಚಾತುರ್ಮಾಸ್ಯ ಸಂದರ್ಭದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಾಗೋದ್ದರಣ ಪ್ರಸಂಗ ಯಕ್ಷಗಾನ ನಡೆಯಿತು.

ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ನಡೆದ ನಾಗೋದ್ದರಣ ಪ್ರಸಂಗ ಯಕ್ಷಗಾನಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಆರಂಭದಲ್ಲಿ ಸರ್ಪಾದಿಗಳಾಗಿ ಮಣಿಪಾಲ ಕೆ.ಯಂ.ಸಿ.ಯ ಪ್ರಸಿದ್ದ ವೈದ್ಯರಾದ ಡಾ.ಸುನೀಲ್ ಮುಂಡ್ಕೂರು, ಕಟೀಲು ಮೇಳದ ಕಲಾವಿದ ಡಾ.ಶ್ರುತಕೀರ್ತಿರಾಜ್, ಕಿಶೋರ್ ಕೂಡ್ಲು, ಉಪಾಸನ ಮತ್ತು ಕಿಶನ್ ನೆಲ್ಲಿಕ್ಕಟ್ಟೆ, ಗರುಡನಾಗಿ ಹರಿನಾರಾಯಣ ಎಡನೀರು, ಕಾಳಿಂಗನಾಗಿ ಹರೀಶ್ ಶಟ್ಟಿ ಮಣ್ಣಾಪು, ಕಾಳಿಂಗ ದೂತ ಬಾಲಕೃಷ್ಣ ಮಣಿಯಾಣಿ ಮವ್ವಾರು ರಂಜಿಸಿದರು.

ಮತ್ಯರಾಜನಾಗಿ ಹಿರಿಯ ಕಲಾವಿದ ವಸಂತ ಗೌಡ ಕಾಯರ್ತಡ್ಕ, ಮತ್ಯಕನ್ಯೆಯರಾಗಿ ಅರುಣ್ ಕೋಟ್ಯಾನ್, ಸಂಜಯ ಪೂಜಾರಿ, ಸೌಭರಿ ಋಷಿಯಾಗಿ ಬಾಲಕೃಷ್ಣ ಮಣಿಯಾಣಿ ಮವ್ವಾರು ಭಾಗವಹಿಸಿದರು.

ಶ್ರೀಕೃಷ್ಣನಾಗಿ ಉಡುಪಿಯ ಕುಮಾರಿ ವಿಂದ್ಯಾ ಆಚಾರ್ಯ, ಬಲರಾಮನಾಗಿ ಶ್ರೀಮತಿ ವನ್ಯಶ್ರೀ ಉಡುಪಿ, ಗೋಪಾಲಕ ನಾಗಿ ಪೆರುವೂಡಿ ಸುಬ್ರಹ್ಮಣ್ಯ ಭಟ್ ರಂಜಿಸಿದರು.

ದಕ್ಷಿಣಾಮೂರ್ತಿ ಶ್ರೀ ಗೋಪಾಲಕೃಷ್ಣ ದೇವರ ಸನ್ನಿದಾನದದಲ್ಲಿ ಪೂಜ್ಯ ಶ್ರೀಗಳವರ ಆಶೀರ್ವಾದದಿಂದ ಯಶಸ್ವಿ ಉತ್ತಮ ಪ್ರದರ್ಶನವಾಗಿ ರಂಜಿಸಿತು.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ಬೃಹತ್ ಯೋಜನೆ ಕಾರ್ಯಗತಗೊಳಿಸುವ ಶತಪ್ರಯತ್ನದಲ್ಲಿರುವ ಸಿರಿಬಾಗಿಲು ಪ್ರತಿಷ್ಠಾನದ ಸಂಯೋಜನೆಯು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments