ರಾಜಸ್ಥಾನದ ಕೌರಾಲಿಯ ಭಾರತ್ ಆಸ್ಪತ್ರೆಯಲ್ಲಿ ಮಹಿಳೆ 5 ಶಿಶುಗಳಿಗೆ ಜನ್ಮ ನೀಡಿದ್ದಾರೆ. ರಾಜಸ್ಥಾನದ ಕೌರಾಲಿಯಲ್ಲಿರುವ ಭಾರತ್ ಆಸ್ಪತ್ರೆಯಲ್ಲಿ 25 ವರ್ಷದ ಮಹಿಳೆ ಸೋಮವಾರ ಐದು ಶಿಶುಗಳಿಗೆ ಜನ್ಮ ನೀಡಿದ್ದಾರೆ.
ಅವರಲ್ಲಿ ಇಬ್ಬರು ಬದುಕುಳಿದರೆ, ಮೂವರು ಅವಧಿಪೂರ್ವ ಹೆರಿಗೆಯಿಂದಾಗಿ ಸಾವನ್ನಪ್ಪಿದ್ದಾರೆ. ಅಶ್ರಫ್ ಅಲಿ ಅವರ ಪತ್ನಿ ರೇಶ್ಮಾ ಎಂಬ ಮಹಿಳೆ ಸಾಮಾನ್ಯ ಹೆರಿಗೆ ಮೂಲಕ ಮೂರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು.
ಮಕ್ಕಳ ಜನನದ ನಂತರ, ಮಹಿಳೆ ಇಬ್ಬರು ಮಕ್ಕಳೊಂದಿಗೆ ಆರೋಗ್ಯವಾಗಿದ್ದಾರೆ ಮತ್ತು ಮೂವರು ಬದುಕುಳಿದಿಲ್ಲ. “ಮಹಿಳೆ ಮದುವೆಯಾಗಿ 7 ವರ್ಷಗಳ ನಂತರ ಮಕ್ಕಳಿಗೆ ಜನ್ಮ ನೀಡಿದ್ದಾರೆ” ಎಂದು ಮೂಲಗಳು ತಿಳಿಸಿವೆ.
ಕರೌಲಿ ಭಾರತ್ ಆಸ್ಪತ್ರೆಯ ನಿರ್ದೇಶಕಿ ಡಾ.ಭರತ್‌ಲಾಲ್ ಮೀನಾ ಮತ್ತು ಸ್ತ್ರೀರೋಗ ತಜ್ಞೆ ಆಶಾ ಮೀನಾ ಮಾತನಾಡಿ, ‘ಗರ್ಭಧಾರಣೆಯ 7 ತಿಂಗಳಲ್ಲೇ ಮಕ್ಕಳು ಜನಿಸಿದ್ದರಿಂದ ಅವಧಿಪೂರ್ವ ಹೆರಿಗೆಯಾಗಿದೆ. ಮಕ್ಕಳನ್ನು ತಾಯಿ ಮತ್ತು ಮಕ್ಕಳ ಘಟಕದ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಕಳುಹಿಸಿದ್ದೇವೆ,”
ಚಿಕಿತ್ಸೆ ವೇಳೆ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಕಾಂಪೌಂಡರ್ ತಿಳಿಸಿದರೆ, ಉಳಿದ ಇಬ್ಬರು ಮಕ್ಕಳನ್ನು ಉತ್ತಮ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಜೈಪುರಕ್ಕೆ ಕಳುಹಿಸಲಾಗಿದೆ.
ಸದ್ಯ ಇಬ್ಬರು ಮಕ್ಕಳ ಸ್ಥಿತಿಯು ಕೂಡಾ ಚಿಂತಾಜನಕವಾಗಿದೆ ಎನ್ನಲಾಗಿದೆ. ಇದರಿಂದ ಹೆತ್ತವರ ಮನದಲ್ಲಿ ಚಿಂತೆಯ ಕಾರ್ಮೋಡ ಕವಿದಂತಾಗಿದೆ.
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ