ರಸ್ತೆಯೊಂದರಲ್ಲಿ ಹುಲಿಯನ್ನು ಆ ಬದಿಯಿಂದ ಈಚೆ ಕಡೆಗೆ ದಾಟಿಸುವ ದೃಶ್ಯದ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.
ರಸ್ತೆಯ ಎರಡೂ ಬದಿಯ ವಾಹನಗಳನ್ನು ನಿಲ್ಲಿಸಿ ಹುಲಿಯನ್ನು ಅರಣ್ಯಾಧಿಕಾರಿಗಳು ರಸ್ತೆ ದಾಟಿಸಿದ್ದಾರೆ. ಹುಲಿಯು ಏನೂ ಆಗದಂತೆ ನಿರ್ವಿಕಾರವಾಗಿ ನಿರ್ಲಿಪ್ತತೆಯಿಂದ ರಸ್ತೆ ದಾಟುತ್ತಿದೆ.
ಅರಣ್ಯಾಧಿಕಾರಿಯೊಬ್ಬರು ಹತ್ತಿರ ಹೋಗದಂತೆ ಜನರಿಗೆ ಕಿವಿಮಾತು ಹೇಳುತ್ತಿದ್ದಾರೆ. ಈ ದೃಶ್ಯ ನೋಡಲು ರುದ್ರ ರಮಣೀಯವಾಗಿದೆ. ಎಷ್ಟು ಸುಂದರವೋ ಅಷ್ಟೇ ಅಪಾಯಕಾರಿಯೂ ಕೂಡಾ.
ಈ ವೀಡಿಯೊವನ್ನು IFS ಅಧಿಕಾರಿ ಪ್ರವೀಣ್ ಕಾಸ್ವಾನ್ (ಐಎಫ್ಎಸ್, ಭಾರತೀಯ ಅರಣ್ಯ ಸೇವೆ) ಎಂಬ ಅರಣ್ಯಾಧಿಕಾರಿಯೊಬ್ಬರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.