ಕಾಲೇಜಿಗೆಂದು ತೆರಳಿದ್ದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ.
ಪೋಷಕರಲ್ಲಿ ತೀವ್ರ ಆತಂಕ ಮನೆಮಾಡಿದೆ. ಇವರು ನಾಲ್ವರೂ ಕೂಡಾ ಸ್ಟೇಷನ್ ರಸ್ತೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಇಬ್ಬರು ಶಕ್ತಿನಗರದ ವಿದ್ಯಾರ್ಥಿಗಳು ಹಾಗೂ ಇನ್ನಿಬ್ಬರು ರಾಯಚೂರಿನ ವಿದ್ಯಾರ್ಥಿಗಳು. ನಾಲ್ವರು ವಿದ್ಯಾರ್ಥಿನಿಯರ ಪೋಷಕರಲ್ಲಿ ಒಬ್ಬರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾಹಿತಿ ಆಧರಿಸಿ ಸದರಬಜಾರ್ ಠಾಣೆ ಪಿಎಸ್ ಐ ಹಾಗೂ ಮಹಿಳಾ ಠಾಣೆ ಪಿಎಸ್ ಐ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿದೆ.
ಪಾಲಕರಲ್ಲಿ ಆತಂಕ ಹೆಚ್ಚಿದ್ದರೆ, ಕಾಲೇಜಿನ ಇತರ ಪೋಷಕರೂ ಕಂಗಾಲಾಗಿದ್ದಾರೆ. ಪೊಲೀಸರು ಎರಡು ತಂಡಗಳಲ್ಲಿ ತೀವ್ರ ಪರಿಶೀಲನೆ, ಹುಡುಕಾಟ ನಡೆಸುತ್ತಿದ್ದಾರೆ.