ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ : ನೀರಜ್ ಚೋಪ್ರಾ ನಾಲ್ಕನೇ ಪ್ರಯತ್ನದಲ್ಲಿ 88.13 ಮೀಟರ್ ಎಸೆದು ಬೆಳ್ಳಿ ಪದಕ ಪಡೆದರು.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ನಿನ್ನೆ ಭಾರತದ ನೀರಜ್ ಚೋಪ್ರಾ ಅವರು ಪುರುಷರ ಜ್ಯಾವೆಲಿನ್ ಥ್ರೋ ಎಸೆತದಲ್ಲಿ 88.13 ಮೀಟರ್ ದೂರ ಎಸೆದು ಬೆಳ್ಳಿ ಪದಕವನ್ನು ಗೆದ್ದರು.
ಇದು ಈವರೆಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಇತಿಹಾಸದಲ್ಲಿ ಭಾರತ ಗಳಿಸಿದ ಎರಡನೇ ಪದಕವಾಗಿದೆ.
ಇದಕ್ಕೆ ಮೊದಲು ಅಂಜು ಬಾಬ್ಬಿ ಜೋರ್ಜ್ ಅವರು ಮಹಿಳೆಯರ ಲಾಂಗ್ ಜಂಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು.