ದ.ಕ.ಜಿ.ಪಂ.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಈಜು ಸ್ಪರ್ಧೆಯು ದಿನಾಂಕ 15.07.2022ನೇ ಶುಕ್ರವಾರ ಪುತ್ತೂರು ಬಾಲವನ ಈಜುಕೊಳದಲ್ಲಿ ನಡೆಯಿತು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ವಿದ್ಯಾರ್ಥಿಗಳಾದ ಧನ್ವಿತ್.ಕೆ(ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ದರ್ಬೆಯ ಮ್ಯಾನೇಜರ್ ಶ್ರೀ ಕೇಶವ ಹಾಗೂ ಮೀನಾಕ್ಷಿ ದಂಪತಿಗಳ ಪುತ್ರ), ಪ್ರತೀಕ್ಷ ಆಳ್ವ (ಇಂಜಿನಿಯರ್ ಪಡುಮಲೆ ಶ್ರೀ ಚಂದ್ರಶೇಖರ್ ಆಳ್ವ ಮತ್ತು ಉಷಾ.ಸಿ.ಆಳ್ವರ ಪುತ್ರಿ)
ಮತ್ತು ಮಹಿನ್.ಪಿ.ಆರ್(ಶ್ರೀ ರಾಕೇಶ್ ಕುಮಾರ್ ಮತ್ತು ಜ್ಯೋತಿ.ಎನ್ ದಂಪತಿ ಪುತ್ರಿ) ಇವರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಹಾಗೂ ನಮನ್ ನಾಯಕ್ (ಸಂದೀಪ್ ನಾಯಕ್.ಬಿ ಮತ್ತು ನಮಿತಾನಾಯಕ್ .ಬಿ ಇವರ ಸುಪುತ್ರ) ತೃತೀಯ ಸ್ಥಾನ ಪಡೆದಿರುತ್ತಾನೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.