ಇಂದು ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಪರಮಪೂಜ್ಯ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಈ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಯಕ್ಷಗಾನ ಪ್ರದರ್ಶನವು ದೇವರಗುಡ್ಡೆ ಶ್ರೀ ಗುರುದೇವ ಮಠದಲ್ಲಿ ನಡೆಯಲಿದೆ. ಇಂದು ಅಂದರೆ ದಿನಾಂಕ 23.07.2022ನೇ ಶನಿವಾರ ಸಂಜೆ ಘಂಟೆ 6ಕ್ಕೆ ಸರಿಯಾಗಿ ಯಕ್ಷಗಾನ ಪ್ರದರ್ಶನ ಆರಂಭವಾಗಲಿದೆ.
ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ “ಸುದರ್ಶನ ವಿಜಯ, ಸುಧನ್ವ ಮೋಕ್ಷ” ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿದೆ. ವಿವರಗಳಿವೆ ಚಿತ್ರವನ್ನು ನೋಡಿ.