ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರು ಇದರ ಆಶ್ರಯದಲ್ಲಿ ಜುಲೈ 19ರಂದು ದರ್ಬೆಯ ಆಫೀಸರ್ ಕ್ಲಬ್ ಪುತ್ತೂರು ಇಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ 14 ವಯೋಮಾನದ ಬಾಲಕಿಯರ ವಿಭಾಗದ ಆಯ್ಕೆ ಪ್ರಕ್ರಿಯೆಯಲ್ಲಿ ಸಮನ್ವಿತಾ ಕೆ ವಿನ್ಯಾಸ್ ಕನ್ಸ್ಟ್ರಕ್ಷನ್ ಮಾಲಕ ಬಪ್ಪಳಿಗೆಯ ಕಿಶೋರ್ ಕುಮಾರ್ ಮತ್ತು ರೂಪಶ್ರೀ ಕೆ ರವರ ಪುತ್ರಿ), ಡಿ. ಹರ್ಷ (ಚಿಕ್ಕಪುತ್ತೂರಿನ ಎಸ್ ಶಿವಕುಮಾರ್ ಪುತ್ರಿ) ಆಯ್ಕೆಯಾಗಿರುತ್ತಾರೆ.

ಇವರು ಜುಲೈ 23ರಂದು ಸರಕಾರೀ ಪ್ರೌಢಶಾಲೆ ನ್ಯೂಪಡ್ಪು ಇಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕನ್ನು ಪ್ರತಿನಿಧಿಸಲಿರುವರು ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.