Sunday, January 19, 2025
Homeಸುದ್ದಿತಲಕಳ ಧರ್ಮಚಾವಡಿಯ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ

ತಲಕಳ ಧರ್ಮಚಾವಡಿಯ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ

ತಲಕಳ ಧರ್ಮಚಾವಡಿಯ ಸ್ವಾಮೀಜಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.

ಅವರ ದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದರೂ ಇದೂ ಅನೇಕ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಮಂಗಳೂರಿನ ಬಜಪೆ ಸಮೀಪದ  ತಲಕಳದಲ್ಲಿರುವ ಶ್ರೀಕೃಷ್ಣ ದೇವಿಪ್ರಸಾದ ತೀರ್ಥ ಸ್ವಾಮೀಜಿಯವರ ದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅವರು ವಾಸವಾಗಿದ್ದ  ತಲಕಳ ಧರ್ಮಚಾವಡಿ ಕಟ್ಟಡದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಅವರ ಪೂರ್ವಾಶ್ರಮದ ಹೆಸರು ದೇವಿಪ್ರಸಾದ್ ಶೆಟ್ಟಿ ಎಂಬುದಾಗಿದ್ದು ಅವರು ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದರು.

ಸಂಸಾರದಲ್ಲಿ ವಿರಸ, ವಿರಕ್ತಿಗಳನ್ನು ಹೊಂದಿ ಅವರು ಎಕರೆಗಟ್ಟಲೆ ಸ್ಥಳದಲ್ಲಿ ಧರ್ಮಚಾವಡಿ ಎಂಬ ಸಂಸ್ಥೆಯನ್ನು ಕಟ್ಟಿ ಸನ್ಯಾಸದೀಕ್ಷೆಯನ್ನು ಸ್ವೀಕರಿಸಿದ್ದರು. ಧರ್ಮಚಾವಡಿ ಸಂಸ್ಥೆಗೆ ಅಗಾಧ ಪ್ರಮಾಣದ ಅಸ್ತಿ, ಸಂಪತ್ತು ಇದೆ ಎಂದು ಹೇಳಲಾಗುತ್ತಿದೆ.

ಆದುದರಿಂದ  ಸಾವಿನ ಬಗ್ಗೆ ಕೆಲವೊಂದು ಸಂದೇಹಗಳನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಅವರ ಪೂರ್ವಾಶ್ರಮದ ಪತ್ನಿ ಮತ್ತು ತಾಯಿ ಅಲ್ಲಿಯೇ ದೂರದಲ್ಲಿದ್ದ ಅವರ ಪೂರ್ವಾಶ್ರಮದ ಮನೆಯಲ್ಲಿ ವಾಸಿಸುತ್ತಿದ್ದರು.

ಮಗಳು ವಿದೇಶದಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿಯಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments