ನಿನ್ನೆ ಅಹಮದಾಬಾದ್‌ನಲ್ಲಿರುವ ಗುಜರಾತ್ ಕಾಂಗ್ರೆಸ್ ಪ್ರದೇಶ ಸಮಿತಿಯ ಕಚೇರಿಯಲ್ಲಿ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ವಿರೂಪಗೊಳಿಸಲಾಗಿದೆ. ‘ಇಂದಿನಿಂದ ಈ ಕಚೇರಿಯ ಹೆಸರನ್ನು ಹಜ್ ಹೌಸ್ ಎಂದು ಬದಲಾಯಿಸಲಾಗಿದೆ’ ಎಂಬ ಪೋಸ್ಟರ್‌ಗಳನ್ನು ಅವುಗಳ ಮೇಲೆ ಅಂಟಿಸಲಾಗಿದೆ.
ಜಗದೀಶ್ ಠಾಕೂರ್ ಹೇಳಿಕೆಯನ್ನು ವಿರೋಧಿಸಿ ಭಜರಂಗದಳದ ಗುಂಪು ಗುಜರಾತ್ ಕಾಂಗ್ರೆಸ್ ಕಚೇರಿಯನ್ನು ‘ಹಜ್ ಹೌಸ್’ ಎಂದು ಮರುನಾಮಕರಣ ಮಾಡಿದೆ ಎಂದು ತಿಳಿದುಬಂದಿದೆ.
ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ (ಜಿಪಿಸಿಸಿ) ಪ್ರಧಾನ ಕಚೇರಿ ರಾಜೀವ್ ಗಾಂಧಿ ಭವನದಲ್ಲಿ ಶುಕ್ರವಾರ ಮುಂಜಾನೆ ಅಪರಿಚಿತ ವ್ಯಕ್ತಿಗಳು ಕಾಂಗ್ರೆಸ್ ನಾಯಕರ ಚಿತ್ರಗಳನ್ನು ವಿರೂಪಗೊಳಿಸಿದ್ದಾರೆ ಮತ್ತು ಪೋಸ್ಟರ್‌ಗಳನ್ನು ಅಂಟಿಸಿ ಮತ್ತು ಗೋಡೆಗಳಿಗೆ ಬಣ್ಣ ಬಳಿಯುವ ಮೂಲಕ ಕಟ್ಟಡಕ್ಕೆ ‘ಹಜ್ ಹೌಸ್’ ಎಂದು ಮರುನಾಮಕರಣ ಮಾಡಿದ್ದಾರೆ.
ಈ ವಾರದ ಆರಂಭದಲ್ಲಿ ಅಹಮದಾಬಾದ್‌ನಲ್ಲಿ ಜಿಪಿಸಿಸಿ ಅಧ್ಯಕ್ಷ ಜಗದೀಶ್ ಠಾಕೂರ್ ಅವರು ಅಲ್ಪಸಂಖ್ಯಾತರ ಬಗ್ಗೆ ಮಾಡಿದ ಹೇಳಿಕೆಯನ್ನು ವಿರೋಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ಸಿನ ಜಗದೀಶ್ ಠಾಕೂರ್ ಅವರು ಅಲ್ಲಿ ಅವರು “ಸರ್ಕಾರದ ಯಾವುದೇ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಮೇಲೆ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕನ್ನು ನೀಡಬೇಕು” ಎಂದು ಹೇಳಿದರು.
ಈ ಹೇಳಿಕೆಯಿಂದ ರೊಚ್ಚಿಗೆದ್ದ ಭಜರಂಗದಳದ ಕಾರ್ಯಕರ್ತರು ಬೆಳಗಾಗುವುದರೊಳಗೆ ಜಿಪಿಸಿಸಿ ಹೆಚ್‌ಕ್ಯುಗೆ ಆಗಮಿಸಿ ಕಟ್ಟಡದ ಕಾಂಪೌಂಡ್ ಗೋಡೆಯ ಮೇಲೆ ‘ಹಜ್ ಹೌಸ್’ ಎಂದು ಬರೆದಿದ್ದಾರೆ. ಪೋಸ್ಟರ್‌ಗಳಲ್ಲಿ ಕಾಂಗ್ರೆಸ್ ನಾಯಕರ ಮುಖಕ್ಕೆ ಮಸಿ ಬಳಿದರು ಮತ್ತು ಠಾಕೂರ್ ಸ್ಕಲ್ ಕ್ಯಾಪ್ ಧರಿಸಿರುವ ಚಿತ್ರದ ಜೊತೆಗೆ ಜಿಪಿಸಿಸಿ ಪ್ರಧಾನ ಕಚೇರಿಯ ಹೆಸರನ್ನು ‘ಹಜ್ ಹೌಸ್’ ಎಂದು ಬದಲಾಯಿಸಲಾಗಿದೆ ಎಂದು ಹೇಳುವ ಪೋಸ್ಟರ್‌ಗಳನ್ನು ಹಾಕಿದರು.
“ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣದಿಂದ ಬಹುಸಂಖ್ಯಾತ ಸಮುದಾಯದಲ್ಲಿರುವ ಸಿಟ್ಟನ್ನು ನಮ್ಮ ಕಾರ್ಯಕರ್ತರು ಪ್ರತಿಬಿಂಬಿಸಿದ್ದಾರೆ. ಇಂತಹ ರಾಜಕೀಯದಿಂದಲೇ ಕಾಂಗ್ರೆಸ್ ದೇಶಾದ್ಯಂತ ನೆಲೆ ಕಳೆದುಕೊಂಡಿದೆ. ಕಾಂಗ್ರೆಸ್ ನಾಯಕರ ಚಿತ್ರಗಳನ್ನು ವಿರೂಪಗೊಳಿಸುವ ಜವಾಬ್ದಾರಿಯನ್ನು ಭಜರಂಗದಳ ತೆಗೆದುಕೊಳ್ಳುತ್ತದೆ.” ಎಂದು ಬಜರಂಗದಳದ ಉತ್ತರ ಗುಜರಾತ್ ಸಂಚಾಲಕ ಜ್ವಾಲಿತ್ ಮೆಹ್ತಾ ಹೇಳಿದರು.
ಇದು ಬಜರಂಗದಳದ ಕಾರ್ಯಕರ್ತರ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ಗೂಂಡಾಗಿರಿ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ ಆರೋಪಿಸಿದ್ದಾರೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions