Sunday, January 19, 2025
Homeಸುದ್ದಿಗುರುಪುರ ಕೈಕಂಬದ ಮೋದಿ ಪರಿವಾರ್ ರಿಕ್ಷಾ ಚಾಲಕ, ಮಾಲಕರ ನಿಸ್ವಾರ್ಥ ಸೇವೆ - ದಾನಿಗಳ...

ಗುರುಪುರ ಕೈಕಂಬದ ಮೋದಿ ಪರಿವಾರ್ ರಿಕ್ಷಾ ಚಾಲಕ, ಮಾಲಕರ ನಿಸ್ವಾರ್ಥ ಸೇವೆ – ದಾನಿಗಳ ಹಾಗೂ ಸಾರ್ವಜನಿಕರ ಸಹಕಾರದಿಂದ ಪರಿಸರದ ಜನರಿಗೆ ಅಂಬುಲೆನ್ಸ್ ಕೊಡುಗೆ

ದಿನಾಂಕ 21/07/2022 ರ ಗುರುವಾರ ಕೈಕಂಬ ಜಂಕ್ಷನ್ ರಸ್ತೆ ಪಕ್ಕದಲ್ಲಿ, ಅನಾಥ ಶವಯೊಂದು ಇರುವ ಸುದ್ದಿಯನ್ನು ತಿಳಿದ, ಮೋದಿ ಪರಿವಾರ್ ರಿಕ್ಷಾ ಚಾಲಕರು ತಕ್ಷದಲ್ಲೆ ಬಜಪೆ ಪೋಲಿಸ್ ಠಾಣೆಗೆ ವಿಷಯವನ್ನು ತಿಳಿಸಿದ್ದು, ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ನಂತರದಲ್ಲಿ,ಅನಾಥ ಶವವನ್ನು ಪೋಲಿಸರ ಸಮ್ಮುಖದಲ್ಲಿ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸುವಲ್ಲಿಯೂ ಸಹಕಾರವನ್ನು ನೀಡಿರುತ್ತಾರೆ.



ತುರ್ತು ಪರಿಸ್ಥಿತಿಯಲ್ಲಿ ಕ್ಷಣಾರ್ದದಲ್ಲೇ ಅಂಬುಲೆನ್ಸ್ ಸೇವೆಯನ್ನು ನೀಡುತ್ತಿರುವ ಮೋದಿ ಪರಿವಾರ್ ರಿಕ್ಷಾ ಚಾಲಕರು ಗುರುಪುರ ಕೈಕಂಬದ ಆಟೋ ಚಾಲಕರಿಗೆ ಸಾರ್ವಜನಿಕರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನ ಸಮರ್ಪಿಸುತಿದ್ದೇವೆ. 


ಗುರುಪುರ ಕೈಕಂಬದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಅಂಬುಲೆನ್ಸ್ ಕೊರತೆಯನ್ನು ಮನಗಂಡ,ಕೈಕಂಬ ಆಟೋ ಚಾಲಕರು ಅನೇಕ ಕೊಡುಗೈ ದಾನಿಗಳ ಹಾಗು ಸಾರ್ವಜನಿಕ ಸಹಕಾರದಲ್ಲಿ ಎರಡು ಅಂಬುಲೆನ್ಸನ್ನು ಲೋಕಾರ್ಪಣೆ ಮಾಡಿದ್ದು,ಸಾರ್ವಜನಿಕರಿಗೆ ತುಂಬಾ ಸಹಕಾರಿಯಾಗುತ್ತಿದೆ.

ಈಗಾಗಲೇ ತುರ್ತು ಪರಿಸ್ಥಿತಿಯಲ್ಲಿ  ತಕ್ಷಣದ ಸೇವೆಗಳನ್ನು ಮೋದಿ ಪರಿವಾರ್ ರಿಕ್ಷಾ ಚಾಲಕರು ಗುರುಪುರ ಕೈಕಂಬ ಇವರು ನೀಡುತ್ತಿದ್ದು,ಸಾರ್ವಜನಿಕರ ಮೆಚ್ಚುಗೆಯನ್ನು ಪಡೆಯುತ್ತಿದೆ.


ತುರ್ತು ಪರಿಸ್ಥಿತಿಗಳಲ್ಲಿ ಕರೆ ಮಾಡಿದಾಗ ಹಿಂದೆ ಮುಂದೆ ನೋಡದೆ ತಕ್ಷಣದಲ್ಲೇ ಬರುವ ಆಟೋ ಚಾಲಕರಿಗೆ ಕೋಟಿ ನಮನಗಳನ್ನು ಸಲ್ಲಿಸುತ್ತ,ನಿಮ್ಮ ಅಂಬುಲೆನ್ಸ್ ಸೇವೆಯೂ ಮುಂದೆಯೂ ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ನೆರವಾಗಲಿ, ದೇವರು ತಮಗೆ ಸಕಲೈಶ್ವರ್ಯಗಳನ್ನು ದಯಪಾಲಿಸಲಿ, ಸಾರ್ವಜನಿಕ ಸೇವೆಗಳನ್ನೂ ನಿರಂತರವಾಗಿ ಮಾಡುವ ಶಕ್ತಿಯನ್ನು ಭಗವಂತನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ.
ಬರಹ: ಸಾರ್ವಜನಿಕ ಬಂಧುಗಳು, ಗುರುಪುರ,ಕೈಕಂಬ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments