ಕಾಸರಗೋಡು ಜಿಲ್ಲೆಯ ಎಡನೀರಿನಲ್ಲಿರುವ ಶ್ರೀ ಎಡನೀರು ಮಠ ಸಾಂಸ್ಕೃತಿಕ ಕಲೆಗಳಿಗೆ ಯಾವಾಗಲೂ ಪ್ರೋತ್ಸಾಹ ಕೊಡುತ್ತಾ ಬಂದಿದೆ.
ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದ್ವಿತೀಯ ಚಾತುರ್ಮಾಸ್ಯದ ಪ್ರಯುಕ್ತ ಈ ವರ್ಷವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅದರಂತೆ ದಿನಾಂಕ 06.08.2022ನೇ ಶನಿವಾರ ಸಂಜೆ ಘಂಟೆ 6 ಕ್ಕೆ ಸರಿಯಾಗಿ ” ಕೃಷ್ಣಾರ್ಜುನ ಕಾಳಗ, ಅಗ್ರಪೂಜೆ ” ಎಂಬ ಯಕ್ಷಗಾನ ಪ್ರದರ್ಶನವು ನಡೆಯಲಿದೆ.
ದಕ್ಷಿಣ ಕನ್ನಡ, ಕಾಸರಗೋಡು ಉಭಯ ಜಿಲ್ಲೆಗಳ ಪ್ರಸಿದ್ಧ ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮವು ಸಂಜೆ ಘಂಟೆ 6 ಕ್ಕೆ ಸರಿಯಾಗಿ ಆರಂಭವಾಗುವುದೆಂದು ಆಯೋಜಕರು ತಿಳಿಸಿದ್ದಾರೆ.