ಯಕ್ಷಗಾನ ತಾಳಮದ್ದಳೆ ಕೂಟಗಳ ಆಸ್ವಾದಕರಿಗೆ ಜುಲೈ 22ರಿಂದ ಒಂದು ಒಳ್ಳೆಯ ಅವಕಾಶ ಸಿಗಲಿದೆ. ಸುಮಾರು ಏಳು ದಿನಗಳಲ್ಲಿ ವಿವಿಧ ಪ್ರಸಂಗಗಳ ತಾಳಮದ್ದಳೆ ನಡೆಯಲಿದೆ.
ಏಳು ದಿನಗಳಲ್ಲಿ ವಿಭೀಷಣ ನೀತಿ, ಅಗ್ರಪೂಜೆ, ಗದಾಯುದ್ಧ, ತರಣಿಸೇನ ಕಾಳಗ, ಶ್ಯಮಂತಕಮಣಿ, ಮೋಹಿನಿ ಏಕಾದಶಿ, ಭಕ್ತ ಮಯೂರಧ್ವಜ ಎಂಬ ಪ್ರಸಂಗಗಳ ತಾಳಮದ್ದಳೆ ನಡೆಯಲಿದೆ.
ಕೊನೆಯ ದಿನ ಯಕ್ಷನೃತ್ಯ ಕಾರ್ಯಕ್ರಮವೂ ನಡೆಯಲಿದೆ. ಈ ತಾಳಮದ್ದಳೆ ಜುಲೈ 22ರಿಂದ ಜುಲೈ 29ರ ತನಕ ಪ್ರತಿದಿನ ಸಂಜೆ ಘಂಟೆ 5.45ರಿಂದ ಆರಂಭವಾಗಲಿದೆ.
ಬೆಳ್ತಂಗಡಿಯ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದಲ್ಲಿ ಕಾರ್ಯಕ್ರಮ ನಡೆಯಲಿದೆ.
ವಿವರಗಳಿಗೆ ಚಿತ್ರ ನೋಡಿ.