Sunday, January 19, 2025
Homeಸುದ್ದಿತಾನು ಕೆಲಸ ಮಾಡುವ ಮನೆಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ದೋಚಿದ ದಂಪತಿ ಬಂಧನ

ತಾನು ಕೆಲಸ ಮಾಡುವ ಮನೆಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ದೋಚಿದ ದಂಪತಿ ಬಂಧನ

ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿ ಪುತ್ತೂರಿನ ದಂಪತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಇವರು ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ.

ಪುತ್ತೂರಿನ ಸರ್ವೇ ಗ್ರಾಮದ ಬಾವಿಕಟ್ಟೆ ನಿವಾಸಿಗಳಾದ ಪ್ರಮೋದ್ ಮತ್ತು ಆತನ ಪತ್ನಿ ಸುಮಾ ಎಂಬವರನ್ನು ವಿಟ್ಲ ಪೊಲೀಸ್  ಇನ್ಸ್ ಪೆಕ್ಟರ್ ನಾಗರಾಜ್ ಎಚ್ ನೇತೃತ್ವದ ತಂಡ ಬಂಧಿಸಿದೆ. ಇವರು ವಿಟ್ಲ ಸಮೀಪದ  ದಂಬೆತಾರು ವಿನಯಚಂದ್ರ ನಾಯಕ್ ಎಂಬವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. 

ಮನೆಯ ಬೆಡ್ ರೂಮ್ ನ ಕಪಾಟಿನಲ್ಲಿದ್ದ ಚಿನ್ನದ ಬ್ರಾಸ್ ಲೈಟ್, ಚಿನ್ನದ ಲಕ್ಷ್ಮಿ ಸರ, ಚಿನ್ನದ ಪದಕ ಸಹಿತ ಸರ, ಚಿನ್ನದ ಲಕ್ಷ್ಮಿ ಪದಕ ಸಹಿತ ಸರ, 3 ಚಿನ್ನದ ಉಂಗುರಗಳು, ಚಿನ್ನಾಭರಣಗಳು ಸೇರಿದಂತೆ ಒಟ್ಟು 98 ಗ್ರಾಂ ಆಭರಣಗಳನ್ನು ಕಳವು ಮಾಡಿದ್ದರು.

ಚಿನ್ನಾಭರಣಗಳ ಒಟ್ಟು ಮೌಲ್ಯ ಅಂದಾಜು 1,50,000/ ರೂಪಾಯಿ ಎಂದು ತಿಳಿದುಬಂದಿದೆ.  

ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದು, ಕಳವಾಗಿದ್ದ 98 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರನ್ನೂ ವಶಕ್ಕೆ ಪಡೆದುಕೊಂಡು ಬಂಧಿತರನ್ನು ಹೆಚ್ಚಿನ ವಿಚಾರಣೆಗೈಯಲಾಗುತ್ತಿದೆ. 


RELATED ARTICLES

LEAVE A REPLY

Please enter your comment!
Please enter your name here

Most Popular

Recent Comments